ದೇಶ

ಉತ್ತರ ಪ್ರದೇಶ: ಸವರ್ಣಿಯರು ಬಳಸುತ್ತಿದ್ದ ಹ್ಯಾಂಡ್‌ಪಂಪ್ ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಗೆ ಥಳಿತ!

ಸವರ್ಣಿಯರು ಬಳಕೆ ಮಾಡುತ್ತಿದ್ದ ಹ್ಯಾಂಡ್ ಪಂಪ್ ನ್ನು ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟಕೆ ಉತ್ತರ ಪ್ರದೇಶದ ಬಾಂದಾದಲ್ಲಿ ವರದಿಯಾಗಿದೆ.

ಉತ್ತರ ಪ್ರದೇಶ: ಸವರ್ಣಿಯರು ಬಳಸುತ್ತಿದ್ದ ಹ್ಯಾಂಡ್‌ಪಂಪ್ ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಗೆ ಥಳಿತ!
ಥಳಿತ (ಸಾಂದರ್ಭಿಕ ಚಿತ್ರ)
Published On :

ಬಾಂದ: ಸವರ್ಣಿಯರು ಬಳಕೆ ಮಾಡುತ್ತಿದ್ದ ಹ್ಯಾಂಡ್ ಪಂಪ್ ನ್ನು ಬಳಸಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆದ ಘಟಕೆ ಉತ್ತರ ಪ್ರದೇಶದ ಬಾಂದಾದಲ್ಲಿ ವರದಿಯಾಗಿದೆ. 

ಸರ್ಕಾರದಿಂದ ಈ ಹ್ಯಾಂಡ್ ಪಂಪ್ ನ್ನು ಅಳವಡಿಕೆ ಮಾಡಲಾಗಿತ್ತು. ಬಿಸಾಂದ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. 

ತೆಂದುರಾ ಗ್ರಾಮದಲ್ಲಿ ನಾನು ನೀರು ತರುವುದಕ್ಕಾಗಿ ಹ್ಯಾಂಡ್ ಪಂಪ್ ನ್ನು ಬಳಸಿದಾಗ ರಾಮ್ ದಯಾಳ್ ಯಾದವ್ ಎಂಬ ವ್ಯಕ್ತಿಯ ಕುಟುಂಬ ಸದಸ್ಯರು ನನ್ನ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ರಾಮಚಂದ್ರ ರೈದಾಸ್ ದೂರು ನೀಡಿರುವುದಾಗಿ ಎಸ್ ಹೆಚ್ಒ ನರೇಂದ್ರ ಪ್ರತಾಂಪ್ ಸಿಂಗ್ ಮಾಹಿತಿ ನೀಡಿದ್ದಾರೆ. 

ಗಾಯಗೊಂಡ ರೈದಾಸ್ ನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. 2 ತಿಂಗಳ ಹಿಂದೆಯೂ ಹ್ಯಾಂಡ್ ಪಂಪ್ ನಿಂದ ನೀರು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಘರ್ಷಣೆಗಳಾಗಿದ್ದವು. ಆ ನಂತರ ವಿಭಾಗೀಯ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ವಿವಾದವನ್ನು ಬಗೆಹರಿಸಲಾಗಿತ್ತು ಎಂಬ ಮಾಹಿತಿಯೂ ಬಹಿರಂಗವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.