ದೇಶ

ಮದುವೆ ಪಾರ್ಟಿ ಕೊಡದ ವರನನ್ನೇ ಇರಿದು ಕೊಂದ ಸ್ನೇಹಿತರು!

ಮದುವೆಯಾದ ಖುಷಿಗೆ ಎಣ್ಣೆ ಪಾರ್ಟಿ ಕೊಡಲಿಲ್ಲ ಎಂದು ಸ್ನೇಹತನನ್ನೇ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮದುವೆ ಪಾರ್ಟಿ ಕೊಡದ ವರನನ್ನೇ ಇರಿದು ಕೊಂದ ಸ್ನೇಹಿತರು!
ಸಾಂದರ್ಭಿಕ ಚಿತ್ರ
Published On :

ಅಲಿಘಡ: ಮದುವೆಯಾದ ಖುಷಿಗೆ ಎಣ್ಣೆ ಪಾರ್ಟಿ ಕೊಡಲಿಲ್ಲ ಎಂದು ಸ್ನೇಹತನನ್ನೇ ಕೊಂದು ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಅಲಿಘಡದ ಪಲಿಮುಕಿಮ್ ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮದುವೆ ಆಗಿದ್ದ ಖುಷಿಗೆ ಪಾರ್ಟಿ ನೀಡದ ಗೆಳೆಯನನ್ನೇ ಆತನ ಸ್ನೇಹಿತರು ಕೊಂದು ಹಾಕಿದ್ದಾರೆ. ಮೃತ ಸಂತ್ರಸ್ಥನನ್ನು 28 ವರ್ಷದ ಬಬ್ಲು ಸೂರ್ಯವಂಶಿ ಎಂದು ಗುರುತಿಸಲಾಗಿದೆ. ಮೂಲಗಳ ಪ್ರಕಾರ  ಪಶು ವ್ಯಾಪಾರಿಯಾಗಿದ್ದ ಬಬ್ಲು ಮದುವೆಯ ಬಳಿಕ ಪತ್ನಿಯನ್ನು ಮನೆಗೆ ಕರೆ ತಂದಿದ್ದನು. ಪತ್ನಿ ಆಗಮನದ ಹಿನ್ನೆಲೆ ಬಬ್ಲು ಸಹ ಖುಷಿಯಲ್ಲಿದ್ದನು. ವಧು ಬಂದ ಮರುದಿನ ಬಬ್ಲು ಗೆಳೆಯನ ಮನೆಗೆ ಹೋಗಿದ್ದಾನೆ. ನಾಲ್ವರು ಗೆಳೆಯರು ಮದುವೆಯಾದ ಖುಷಿಗೆ ಮದ್ಯದ ಪಾರ್ಟಿ ನೀಡಬೇಕೆಂದು  ಒತ್ತಾಯಿಸಿದ್ದಾರೆ. ಅದಾಗಲೇ ಮದ್ಯದ ನಷೆಯಲ್ಲಿದ್ದ ಸ್ನೇಹಿತರನ್ನು ಕಂಡ ಬಬ್ಲು ಮತ್ತೆ ಮದ್ಯ ತಂದು ಕೊಡಲು ನಿರಾಕರಿಸಿದ್ದಾನೆ.

ಬಬ್ಲು ಪಾರ್ಟಿ ನೀಡಲು ಒಪ್ಪದಿದ್ದಾಗ ಗೆಳೆಯರ ನಡುವೆ ಗಲಾಟೆ ನಡೆದಿದೆ. ಕೊನೆಗೆ ಗೆಳೆಯರೆಲ್ಲರೂ ಸೇರಿ ಚಾಕುವಿನಿಂದ ಬಬ್ಲುವಿನ ಕತ್ತು ಕೊಯ್ದು ಎಸ್ಕೇಪ್ ಆಗಿದ್ದಾರೆ. ನಂತರ ಬಬ್ಲು ಕುಟುಂಬಸ್ಥರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಬಬ್ಲುನನ್ನು  ಅಲಿಗಢ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಬಬ್ಲುನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿ, ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಇತ್ತ ಪರಾರಿಯಾಗಿದ್ದ ಪ್ರಮುಖ ಆರೋಪಿ ರಾಮ್ ಖಿಲಾಡಿ ಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದೇವೆ ಎಂದು ಸಿಐ ನರೇಶ್ ಸಿಂಗ್ ಹೇಳಿದ್ದಾರೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.