ತಿರುಪತಿ ಲಡ್ಡು ಪ್ರಸಾದ ಜೊತೆ 2021ರ ಕ್ಯಾಲೆಂಡರ್, ಡೈರಿ ಕೂಡ ಲಭ್ಯ
ಪ್ರಸಿದ್ಧ ಯಾತ್ರಾತಾಣ ತಿರುಪತಿ ತಿರುಮಲ ದೇಗುಲದಲ್ಲಿ ಲಡ್ಡು ಪ್ರಸಾದದ ಜೊತೆ 2021ರ ಕ್ಯಾಲೆಂಡರ್, ಡೈರಿ ಕೂಡ ನೀಡಲಾಗುತ್ತಿದೆ.

ತಿರುಮಲ: ಪ್ರಸಿದ್ಧ ಯಾತ್ರಾತಾಣ ತಿರುಪತಿ ತಿರುಮಲ ದೇಗುಲದಲ್ಲಿ ಲಡ್ಡು ಪ್ರಸಾದದ ಜೊತೆ 2021ರ ಕ್ಯಾಲೆಂಡರ್, ಡೈರಿ ಕೂಡ ನೀಡಲಾಗುತ್ತಿದೆ.
ಹೌದು.. ತಿರುಪತಿಯಲ್ಲಿ ಶ್ರೀವಾರಿ ಲಡ್ಡು ಪ್ರಸಾದದ ಜೊತೆಗೆ 2021ರ ಕ್ಯಾಲೆಂಡರ್ ಮತ್ತು ಡೈರಿಯನ್ನೂ ಕೊಡಲಾಗುತ್ತಿದೆ. ತಿರುಪತಿ ಶ್ರೀಕ್ಷೇತ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ ಮಾಹಿತಿ ಕೇಂದ್ರಗಳಲ್ಲಿ ಶೇ. 50 ರಿಯಾಯಿತಿಯೊಂದಿಗೆ ಲಡ್ಡು ಮಾರಾಟ ಪ್ರಾರಂಭ ಮಾಡಲಾಗಿದ್ದು, ಜೊತೆಗೆ 2021 ಕ್ಯಾಲೆಂಡರ್, ಡೈರಿಯನ್ನೂ ಸಹ ನೀಡಲಾಗುತ್ತಿದೆ.
ಈ ಹಿಂದೆ ಕೊರೊನಾ ಕಾರಣದಿಂದ ಈ ಹಿಂದೆ ದೇವರ ದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಅಂತೆಯೇ ದೇಗುಲದಲ್ಲಿ 300 ವರ್ಷಗಳ ಇತಿಹಾಸವಿರುವ ಲಡ್ಡು ಪ್ರಸಾದ ವಿತರಣೆಯನ್ನು ಕೂಡ ನಿಲ್ಲಿಸಲಾಗಿತ್ತು. ಕೇಂದ್ರ ಸರ್ಕಾರದ ಅನ್ ಲಾಕ್ ಮಾರ್ಗಸೂಚಿಯಂತೆ ಇತ್ತೀಚೆಗಷ್ಟೇ ಸ್ಥಗಿತವಾಗಿದ್ದ ದರ್ಶನ ಮತ್ತು ಪ್ರಸಾದ ವಿತರಣೆ ಪುನಾರಂಭವಾಗಿತ್ತು. ಮೇ ತಿಂಗಳಲ್ಲಿ ಜಿಲ್ಲಾ ಕೇಂದ್ರಗಳಲ್ಲಿರುವ ಟಿಟಿಡಿ ಕಲ್ಯಾಣ ಮಂಟಪ, ಮಾಹಿತಿ ಕೇಂದ್ರದಲ್ಲಿ ಶೇ. 50 ರಿಯಾಯಿತಿ ದರದಲ್ಲಿ ಲಾಡು ಮಾರಾಟ ಪ್ರಾರಂಭ ಮಾಡಲಾಗಿತ್ತು. ಇದೀಗ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದವರು ಅಲ್ಲಿಯೇ ಲಡ್ಡು ಪ್ರಸಾದವನ್ನೂ ಪಡೆಯಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


