ದೇಶ

'ವೈಕುಂಠ ಏಕಾದಶಿ' ತಿರುಪತಿ- ತಿರುಮಲದಲ್ಲಿ ಯಲ್ಲಿ ವಿಶೇಷ ವ್ಯವಸ್ಥೆ

ತಿರುಮಲದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರ ದರ್ಶನಕ್ಕಾಗಿ ಈ ತಿಂಗಳ 24 ರಿಂದ ತಿರುಪತಿಯಲ್ಲಿ ಸರ್ವ ದರ್ಶನ (ಉಚಿತ) ಟೋಕನ್ ವ್ಯವಸ್ಥೆ ಜಾರಿಗಳಿಸುತ್ತಿರುವುದಾಗಿ ತಿರುಮಲ ತಿರುಪತಿ ದೇವಾಸ್ಥಾನಂ( ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜವಾಹರ್ ರೆಡ್ಡಿ ತಿಳಿಸಿದ್ದಾರೆ.

'ವೈಕುಂಠ ಏಕಾದಶಿ' ತಿರುಪತಿ- ತಿರುಮಲದಲ್ಲಿ ಯಲ್ಲಿ ವಿಶೇಷ ವ್ಯವಸ್ಥೆ
ತಿರುಮಲ ದೇಗುಲ
Published On :

ತಿರುಮಲ: ತಿರುಮಲದಲ್ಲಿ ಶ್ರೀವೆಂಕಟೇಶ್ವರಸ್ವಾಮಿ ವೈಕುಂಠ ದ್ವಾರ ದರ್ಶನಕ್ಕಾಗಿ ಈ ತಿಂಗಳ 24 ರಿಂದ ತಿರುಪತಿಯಲ್ಲಿ ಸರ್ವ ದರ್ಶನ (ಉಚಿತ) ಟೋಕನ್ ವ್ಯವಸ್ಥೆ  ಜಾರಿಗಳಿಸುತ್ತಿರುವುದಾಗಿ ತಿರುಮಲ ತಿರುಪತಿ ದೇವಾಸ್ಥಾನಂ( ಟಿಟಿಡಿ) ಕಾರ್ಯಕಾರಿ ಅಧಿಕಾರಿ ಜವಾಹರ್ ರೆಡ್ಡಿ ತಿಳಿಸಿದ್ದಾರೆ.

ತಿರುಮಲೆಯ ಅನ್ನಮಯ್ಯ ಭವನದಲ್ಲಿ ಶನಿವಾರ ಅವರು ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದಾರೆ. ವೈಕುಂಠ ಏಕಾದಶಿ ಸಂದರ್ಭದಲ್ಲಿ, ತಿಮ್ಮಪ್ಪನ ದೇವಾಲಯದಲ್ಲಿ ವೈಕುಂಠ ದ್ವಾರವನ್ನು ಈ ತಿಂಗಳ 25 ರಿಂದ ಜನವರಿ 3 ರವರೆಗೆ ತೆರೆಯಲಾಗುವುದು. 300 ರೂ.ಗಳ ವಿಶೇಷ ಪ್ರವೇಶ ಟಿಕೆಟ್ಗಳನ್ನು ಈಗಾಗಲೇ  ಬಿಡುಗಡೆಮಾಡಲಾಗಿದೆ.

ತಿರುಪತಿಯ ಐದು ಸ್ಥಳಗಳಲ್ಲಿ ದಿನಕ್ಕೆ 10,000 ದಂತೆ  ಒಂದು ಲಕ್ಷ ಸರ್ವದರ್ಶನ ಟೋಕನ್ ಗಳನ್ನು ಭಕ್ತರಿಗೆ ಕಲ್ಪಿಸಲು   ಯೋಜಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.