ಗಣರಾಜ್ಯೋತ್ಸವ ದಿನಾಚರಣೆ: ಉತ್ತರ ಪ್ರದೇಶದಿಂದ ಅಯೋಧ್ಯ ರಾಮ ಮಂದಿರದ ಸ್ತಬ್ಧ ಚಿತ್ರ ಪ್ರದರ್ಶನ
ಭಾರತ 72 ನೇ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.

ಲಖನೌ: ಭಾರತ 72 ನೇ ಗಣರಾಜ್ಯೋತ್ಸವ ದಿನಾಚರಣೆಗೆ ಸಿದ್ಧತೆ ನಡೆಸುತ್ತಿದೆ. ರಾಜ್ಯಗಳಿಂದ ಪ್ರದರ್ಶಿಸಲ್ಪಡುವ ಸ್ತಬ್ಧ ಚಿತ್ರಗಳೂ ತಯಾರಾಗುತ್ತಿದ್ದು, ಉತ್ತರ ಪ್ರದೇಶ ರಾಜ್ಯ ಅಯೋಧ್ಯೆ ಶ್ರೀರಾಮ ಮಂದಿರದ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಲಿದೆ.
ಅಯೋಧ್ಯೆಯ ಮಂದಿರವಷ್ಟೇ ಅಲ್ಲದೇ ಅಲ್ಲಿನ ಹಾಗೂ ದೇವಾಲಯದ ಸಂಸ್ಕೃತಿ-ಸಂಪ್ರದಾಯಗಳನ್ನೂ ಸ್ತಬ್ಧ ಚಿತ್ರದಲ್ಲಿ ವಿವರಿಸಲಾಗುತ್ತದೆ.
ಈ ಬಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಲಭ್ಯವಾಗಿದ್ದು, ಅಯೋಧ್ಯ: ಉತ್ತರ ಪ್ರದೇಶದ ಸಾಂಸ್ಕೃತಿಕ ಪರಂಪರೆ ಎಂಬ ಥೀಮ್ ನಡಿಯಲ್ಲಿ ಟ್ಯಾಬ್ಲೋ ಪ್ರದರ್ಶನವಾಗಲಿದೆ. ಅಯೋಧ್ಯೆಯ ದೀಪೋತ್ಸವವೂ ಈ ಸ್ತಬ್ಧ ಚಿತ್ರದಲ್ಲಿ ಕಾಣಬಹುದಾಗಿದೆ. ಗಣಾರಾಜ್ಯೋತ್ಸವದ ಪರೇಡ್ ಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಇದಕ್ಕೆ ಅನುಮೋದನೆ ಸಹ ಲಭಿಸಿದೆ.
ಒಡಿಶಾದ ಟ್ಯಾಬ್ಲೋ ಜೊತೆಗೆ ಉತ್ತರ ಪ್ರದೇಶದ ಟ್ಯಾಬ್ಲೋ ಕಾಣಸಿಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


