ನಾಪತ್ತೆಯಾಗಿದ್ದ ಮಿಗ್ 29 ಪೈಲಟ್ ನಿಶಾಂತ್ ಸಿಂಗ್ ಮೃತದೇಹ 11 ದಿನದ ನಂತರ ಪತ್ತೆ
ನಾಪತ್ತೆಯಾದ ಮಿಗ್ 29 ಕೆ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.

ನಾಪತ್ತೆಯಾದ ಮಿಗ್ 29ಕೆ ಪೈಲಟ್ ಕಮಾಂಡರ್ ನಿಶಾಂತ್ ಸಿಂಗ್ ಅವರ ಮೃತದೇಹ ಸೋಮವಾರ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿದೆ.
ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಿಗ್ -29 ಕೆ ತರಬೇತಿ ವಿಮಾನವು ನವೆಂಬರ್ 26ರಂದು ಅರಬ್ಬಿ ಸಮುದ್ರಕ್ಕೆ ಧುಮುಕಿದ ನಂತರ ಕಮಾಂಡರ್ ನಿಶಾಂತ್ ಸಿಂಗ್ ನಾಪತ್ತೆಯಾಗಿದ್ದರು. ಘಟನೆಯಲ್ಲಿ ಓರ್ವ ಪೈಲಟ್‌ನನ್ನು ರಕ್ಷಿಸಿದ್ದು ಕಮಾಂಡರ್ ನಿಶಾಂತ್ ಸಿಂಗ್ ಮೃತದೇಹ ಇಂದು ಸಿಕ್ಕಿದೆ.
ಅಪಘಾತದ ನಂತರ ಒಂದು ಗಂಟೆಯ ನಂತರವೂ ಪೈಲಟ್‌ನನ್ನು ರಕ್ಷಿಸುವುದು ಕಷ್ಟವಾಗುತ್ತದೆ ಎಂದು ರಕ್ಷಣಾ ವಿಶ್ಲೇಷಕ ವೈಸ್ ಅಡ್ಮಿರಲ್(ನಿವೃತ್ತ) ಶೇಖರ್ ಸಿನ್ಹಾ) ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿ ಹೇಳಿದ್ದರು.
ರಷ್ಯಾದ ಮೂಲದ ಅವಳಿ ಆಸನಗಳ ತರಬೇತಿನಿರತ ವಿಮಾನವು ದೇಶದ ಏಕೈಕ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಮಾದಿತ್ಯ ಡೆಕ್‌ನಿಂದ ಹೊರಟ ನಂತರ ಸಮುದ್ರದಲ್ಲಿ ಮುಳುಗಿತ್ತು.
ಖೇದದ ಸಂಗತಿ ಎಂದರೆ ಮೃತ ನಿಶಾಂತ್ ಕಳೆದ ಮೇ ನಲ್ಲಿ ವಿವಾಹ ಮಾಡಿಕೊಂಡಿದ್ದರು.ಈ ಬಗ್ಗೆ ತಮ್ಮ ಹಿರಿಯ ಅಧಿಕಾರಿಗಳಿಗೆ ಅವರು ಬರೆದ ಪತ್ರ ವೈರಲ್ ಆಗಿತ್ತು.
"ಇದು ನಿಶಾಂತ್ ಕುಟುಂಬ ಹಾಗೂ ನೌಕಾಪಡೆಗೆ ದೊಡ್ಡ ನಷ್ಟ. ಆರು ತಿಂಗಳ ಹಿಂದೆ ಸಿಡಿಆರ್ ನಿಶಾಂತ್ ಸಿಂಗ್ ಅವರನ್ನು ಮದುವೆಯಾದ ಮಹಿಳೆಗೆ ಇದು ತುಂಬಾ ದೊಡ್ಡ ದುಃಖಕರ ಸಂಗತಿಯಾಗಿದೆ. ಕುಟುಂಬವು ದೇಹವನ್ನು ಪಡೆದುಕೊಳ್ಳದಿರುವುದರಿಂದ ಹಾಗೂ ಹಾಗೆ ಮೃತದೇಹ ಪಡೆದು ರೆ ಮತ್ತು ಕೊನೆಯ ವಿಧಿಗಳನ್ನು ನಿರ್ವಹಿಸದಹೊರತು ವ್ಯಕ್ತಿಯು ಜೀವಂತವಾಗಿರುತ್ತಾನೆ ಎಂಬ ದೀರ್ಘಕಾಲಿಕ ಭರವಸೆ ಹೊಂದಿರುವುದರಿಂದ ಅವರ ಕುಟುಂಬಕ್ಕೆ ಇದು ಅತ್ಯಂತ ಖೇದಕರ ಸಂಗತಿ" ಎಂದು ಇನ್ನೊಬ್ಬ ನೌಕಾ ಯುದ್ಧ ಏವಿಯೇಟರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


