ಗುಜರಾತ್ ನಲ್ಲಿ ಗುಜರಿ ಸೇರಲಿದೆ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ್ದ ಭಾರತದ ಯುದ್ದ ನೌಕೆ ಐಎನ್ಎಸ್ ವಿರಾಟ್
ಭಾರತೀಯ ನೌಕಾಪಡೆಯಲ್ಲಿ ಸುದೀರ್ಘಾವಧಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುದ್ಧ ನೌಕೆ ಐಎನ್ಎಸ್ ವಿರಾಟ್ ಗುಜರಾತ್ ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತದೆ.

ನವದೆಹಲಿ: ಭಾರತೀಯ ನೌಕಾಪಡೆಯಲ್ಲಿ ಸುದೀರ್ಘಾವಧಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯುದ್ಧ ನೌಕೆ ಐಎನ್ಎಸ್ ವಿರಾಟ್ ಗುಜರಾತ್ ನ ಭವ್ ನಗರದಲ್ಲಿ ಕಳಚಿ ಗುಜರಿಗೆ ಹಾಕಲಾಗುತ್ತದೆ.
ಮೂರು ವರ್ಷಗಳ ಹಿಂದೆ ನಿವೃತ್ತವಾಗಿದ್ದ ಐಎನ್ಎಸ್ ವಿರಾಟ್ ನ್ನು ಮುಂಬೈ ನಿಂದ ಗುಜರಾತ್ ನ ಅಲಾಂಗ್ ಗೆ ಕೊಂಡೊಯ್ದು ಮುಂದಿನ ತಿಂಗಳು ಕಳಚಿ ಗುಜರಿಗೆ ಹಾಕಲಾಗುತ್ತದೆ.
1959 ರಲ್ಲಿ ಪೂರ್ಣಗೊಂಡು ಬ್ರಿಟನ್ ನ ರಾಯಲ್ ನೇವಿಯಲ್ಲಿ ಸೇವೆಗೆ ಸೇರ್ಪಡೆಯಾಗಿದ್ದ ಹೆಚ್ಎಂಎಸ್ ಹರ್ಮಿಸ್ ನ್ನು ಅಲ್ಲಿನ ನೌಕಾಪಡೆ 1984 ರಲ್ಲಿ ಹೆಚ್ಎಂಎಸ್ ಹರ್ಮಿಸ್ ನ್ನು ಸೇವೆಯಿಂದ ನಿವೃತ್ತಿಗೊಳಿಸಿತ್ತು. ನಂತರ 1987 ಮೇ. 12 ರಂದು ಭಾರತೀಯ ನೌಕಾ ಪಡೆ ಅದನ್ನು ಸೇವೆಗೆ ನಿಯುಕ್ತಿಗೊಳಿಸಿತ್ತು.
ಶ್ರೀಲಂಕಾದಲ್ಲಿ ಶಾಂತಿ ಸ್ಥಾಪನೆಗಾಗಿ 1989 ರಲ್ಲಿ ನಡೆದ ಆಪರೇಷನ್ ಜುಪಿಟರ್, 1999 ರ ಕಾರ್ಗಿಲ್ ಯುದ್ಧದ ವೇಳೆ ನಡೆದ ಆಪರೇಷನ್ ವಿಜಯ್ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್ಎಸ್ ವಿರಾಟ್ ಯುದ್ಧ ನೌಕೆ ಸೇವೆಯಲ್ಲಿರುವ ವಿಶ್ವದ ಅತ್ಯಂತ ಹಳೆಯ ಯುದ್ಧ ನೌಕೆ ಎಂಬ ಹೆಗ್ಗಳಿಕೆ ಹೊಂದಿದ್ದು, ಗಿನ್ನೀಸ್ ವಿಶ್ವದಾಖಲೆಯ ಪುಟ ಸೇರಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


