ಕೇರಳ-ಕರ್ನಾಟಕ ಗಡಿಯಲ್ಲಿನ 4 ರಸ್ತೆಗಳ ಸಂಚಾರ ನಿಷೇಧ ತೆರವಿಗೆ ಕೇರಳ ಹೈಕೋರ್ಟ್ ಆದೇಶ
ಕೇರಳ ಮತ್ತು ಕರ್ನಾಟಕದ ನಡುವೆ ನಾಗರಿಕ ಪ್ರಯಾಣ ಮತ್ತು ಸರಕುಗಳ ಸಾಗಣೆಗೆ ಅನುಕೂಲವಾಗುವಂತೆ ಗುರುವಾರದಿಂದ ನಾಲ್ಕು ರಸ್ತೆಗಳಲ್ಲಿ ಸಂಚಾರಕ್ಕೆ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.

ಕೊಚ್ಚಿನ್: ಕೇರಳ ಮತ್ತು ಕರ್ನಾಟಕದ ನಡುವೆ ನಾಗರಿಕ ಪ್ರಯಾಣ ಮತ್ತು ಸರಕುಗಳ ಸಾಗಣೆಗೆ ಅನುಕೂಲವಾಗುವಂತೆ ಗುರುವಾರದಿಂದ ನಾಲ್ಕು ರಸ್ತೆಗಳಲ್ಲಿ ಸಂಚಾರಕ್ಕೆ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದೆ.
ಕೇರಳ ಮತ್ತು ಕರ್ನಾಟಕದ ನಡುವಿನ 12 ಅಂತರರಾಜ್ಯ ರಸ್ತೆಗಳ ಮೂಲಕ ಅಂತರರಾಜ್ಯ ಪ್ರಯಾಣದ ನಿಷೇಧವನ್ನು ಘೋಷಿಸಲು ಕೋರಿ ಬಿಜೆಪಿ ಮುಖಂಡ ಮತ್ತು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಕೆ.ಶ್ರೀಕಾಂತ್ ಅವರು ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಕೇಂದ್ರದ ಅನ್ ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಶ್ರೀಕಾಂತ್ ಅವರ ಸಲಹೆಗಾರ ವಿ ಸಜಿತ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ವಾಹನಗಳ ಸಂಚಾರದ ನಿಷೇಧವು ಜಿಲ್ಲೆಯ ಜನರಿಗೆ ತೊಂದರೆಗಳನ್ನು ಸೃಷ್ಟಿಸುತ್ತಿತ್ತು ತೊಂದರ್ರೆಗೆ ಗುರಿಯಾಗುವ ಪ್ರದೇಶಗಳನ್ನು ಗುರುತಿಸಲಾಗಿದೆಯೆ ಎಂದು ಜಿಲ್ಲೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳಬೇಕು ಮತ್ತು ಅಂತಹ ಅನಾಹುತಗಳನ್ನು ತಡೆಗಟ್ಟುವ ಕ್ರಮಗಳನ್ನು ಜಿಲ್ಲಾ ಮತ್ತು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ ಎಂದು ಸರ್ಕಾರದ ಪರ ಅರ್ಜಿದಾರರು ಹೇಳಿದರು. ರಾಜ್ಯದ ಗಡಿ ದಾತಲು ಇಚ್ಚಿಸುವವರು ಪಾಸ್ ಪಡೆಯಬೇಕು. ಕೇಂದ್ರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಸಂಚಾರ ನಡೆಸುವುದಕ್ಕೆ ಗೆ ನಿರ್ಬಂಧಗಳಿವೆ ಎಂದು ಇದರ ಅರ್ಥವಲ್ಲ. ಆಗಸ್ಟ್ 25 ರಂದು ದಕ್ಷಿಣ ಕನ್ನಡದಲ್ಲಿ 247 ಮತ್ತು ಹತ್ತಿರದ ಕಾಸರಗೋಡಿನಲ್ಲಿ 99 ಕೋವಿಡ್ ಪ್ರಕರಣ ವರದಿಯಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಎರಡು ರಾಜ್ಯಗಳ ನಡುವೆ ಪ್ರಯಾಣಿಸಲು ಎನ್‌ಎಚ್ -47 ಮಾತ್ರವೇ ಮುಕ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೋಗುವ ಇತರ ನಾಲ್ಕು ರಾಜ್ಯ ಹೆದ್ದಾರಿಗಳಾದ ಜಾಲ್ಸೂರು, ಪಾಣಿತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಸಂಚಾರ ನಿಷೇಧವನ್ನು ಗುರುವಾರದಿಂದ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


