ದೇಶ

ಕೋವಿಡ್ ಗೆ ಪರಿಣಾಮಕಾರಿಯಾದ ಆಂಟಿ-ಫೈಬ್ರೊಟಿಕ್ ಔಷಧಗಳು- ಸೇನೆ

ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.

ಕೋವಿಡ್ ಗೆ ಪರಿಣಾಮಕಾರಿಯಾದ ಆಂಟಿ-ಫೈಬ್ರೊಟಿಕ್ ಔಷಧಗಳು- ಸೇನೆ
ಸಾಂದರ್ಭಿಕ ಚಿತ್ರಗಳು
Published On :

ನವದೆಹಲಿ: ದೇಶದಲ್ಲಿ ಮೊದಲ ಬಾರಿಗೆ ಆಂಟಿ ಫೈಬ್ರೊಟಿಕ್ ಓಷಧಗಳನ್ನು ಕೋವಿಡ್-19 ಸಂಬಂಧಿತ ಉಸಿರಾಟದ ತೊಂದರೆ
ಅನುಭವಿಸುತ್ತಿರುವ ರೋಗಿಗಳ ಚಿಕಿತ್ಸೆಗೆ ಬಳಸಲಾಗುತ್ತಿದೆ. ಇದರ ನೆರವಿನಿಂದ ಮಹಾರಾಷ್ಟ್ರದ ಪುಣೆಯಲ್ಲಿ ನಾಲ್ವರು ರೋಗಿಗಳು 
ಗುಣಮುಖರಾಗಿದ್ದಾರೆ ಎಂದು ಸೇನೆ ಹೇಳಿದೆ.

ಪುಣೆ ಮೂಲದ ಆರ್ಮಿ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೊಥೊರಾಸಿಕ್ ಸೈನ್ಸ್  ( ಎಐಸಿಟಿಎಸ್ ) ಸಂಶೋಧಕರು ಈ ಔಷಧ ಬಹಳ
 ಪರಿಣಾಮಕಾರಿ ಎಂಬುದನ್ನು  ಪತ್ತೆ ಹಚ್ಚಿದ್ದಾರೆ. ರೋಗಿಗಳು ಸುರಕ್ಷಿತವಾಗಿ ಈ ಔಷಧವನ್ನು ಬಳಸಬಹುದಾಗಿದೆ. ಕೋವಿಡ್-19 ರೋಗಿಗಳು ಶ್ವಾಸಕೋಶ ತೊಂದರೆಯಿಂದ ಬಳಲುವುದನ್ನು ಈ ಔಷಧ ತಡೆಯಲಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಔಷಧದಿಂದ ಬೇಗನೆ ರೋಗಿಗಳು ಗುಣಮುಖರಾಗಲಿದ್ದಾರೆ. ಈ ಔಷಧದಿಂದ ರೋಗಿಗಳು ಲಾಭ ಪಡೆದುಕೊಳ್ಳುವಂತಾಗಲು 
ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಶೋಧನೆಗಳು ನಡೆಯುತ್ತಿವೆ. ಶ್ವಾಸಕೋಶದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿದ್ದ ನಾಲ್ವರು
ರೋಗಿಗಳಿಗೆ ಈ ಔಷಧ ನೀಡಿದ್ದ ಬಳಿಕ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.