ಸೆ.1ರಿಂದ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದಾಗುವ ಆಟಿಕೆಗಳಿಗೆ ದೇಶದೊಳಗೆ ಪ್ರವೇಶ- ಪಾಸ್ವಾನ್
ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದು ಮಾಡಿಕೊಂಡ ಆಟಿಕೆಗಳಿಗೆ ದೇಶದೊಳಗೆ ಅವಕಾಶ ನೀಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.

ನವದೆಹಲಿ: ಸೆಪ್ಟೆಂಬರ್ 1ರಿಂದ ಕಡ್ಡಾಯವಾಗಿ ಗುಣಮಟ್ಟ ಪರೀಕ್ಷಿಸಿದ ನಂತರವಷ್ಟೇ ಆಮದು ಮಾಡಿಕೊಂಡ ಆಟಿಕೆಗಳಿಗೆ ದೇಶದೊಳಗೆ ಅವಕಾಶ ನೀಡಲಾಗುವುದು ಎಂದು ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಚೀನಾ ಸೇರಿದಂತೆ ವಿದೇಶದಿಂದ ಆಮದಾಗುವ ಉಕ್ಕು, ರಾಸಾಯನಿಕ, ಔಷಧೀಯ ವಸ್ತುಗಳು, ವಿದ್ಯುತ್ ಯಂತ್ರೋಪಕರಣಗಳಿಗೆ ಗುಣಮಟ್ಟದ ಮಾನದಂಡಗಳನ್ನು ಸರ್ಕಾರ ಕಡ್ಡಾಯಪಡಿಸುತ್ತಿದೆ. ಸಂಬಂಧಿತ ಸಚಿವಾಲಯದ ಸಹಭಾಗಿತ್ವದೊಂದಿಗೆ ಭಾರತೀಯ ಗುಣಮಟ್ಟ ಬ್ಯೂರೋ ಗುಣಮಟ್ಟದ ಮಾನದಂಡಗಳನ್ನು ರೂಪಿಸುತ್ತಿದೆ.
ಆಮದು ಮಾಡಿಕೊಳ್ಳುವ ಆಟಿಕೆಗಳಿಗೆ ಕಡ್ಡಾಯ ಗುಣಮಟ್ಟದ ನಿಯಂತ್ರಣ ಮಾನದಂಡವನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲಾಗುವುದು, ಆಟಿಕೆಗಳು ಮಾತ್ರವಲ್ಲದೇ, ಉಕ್ಕು, ರಾಸಾಯನಿಕಗಳು, ವಿದ್ಯುತ್ ಉಪಕರಣಗಳು ಮತ್ತು ಬೃಹತ್ ಯಂತ್ರೋಪಕರಣಗಳು, ಪ್ಯಾಕೇಜ್ಡ್ ನೀರು, ಹಾಲಿನ ಉತ್ಪನ್ನದಂತಹ ವಸ್ತುಗಳ ಗುಣಮಟ್ಟ ಪರಿಶೀಲನೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಸುದ್ದಿಗಾರರಿಗೆ ಪಾಸ್ವಾನ್ ತಿಳಿಸಿದ್ದಾರೆ.
ಇದಲ್ಲದೇ, ಚಿನ್ನದ ಗುಣಮಟ್ಟದ ಪರಿಶೀಲನೆ ಜೂನ್ 2021ರಿಂದ ಜಾರಿಗೆ ಬರಲಿದೆ ಎಂದು ಭಾರತೀಯ ಗುಣಮಟ್ಟ ಬ್ಯುರೋ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


