ಶತ್ರು ರಾಷ್ಟ್ರ ಪಾಕ್, ಚೀನಾ ಕಣ್ಣು ತಪ್ಪಿಸಿ ಭಾರತದಿಂದ ಲಡಾಖ್‌ಗೆ ರಹಸ್ಯ ರಸ್ತೆ ಮಾರ್ಗ!
ಚೀನಾ ಮತ್ತು ಪಾಕಿಸ್ತಾನ ಕಣ್ಣುತಪ್ಪಿಸಿ ಲಡಾಖ್‌ಗೆ ಭಾರತ ರಹಸ್ಯ ರಸ್ತೆ ಮಾರ್ಗವನ್ನು ನಿರ್ಮಿಸುತ್ತಿದೆ.

ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಕಣ್ಣುತಪ್ಪಿಸಿ ಲಡಾಖ್‌ಗೆ ಭಾರತ ರಹಸ್ಯ ರಸ್ತೆ ಮಾರ್ಗವನ್ನು ನಿರ್ಮಿಸುತ್ತಿದೆ.
ಸೇನಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಮಾನಾಲಿಯಿಂದ ಲೇಹ್ ಸಂಪರ್ಕಿಸುವ ಹೊಸ ರಸ್ತೆಯು ಲಡಾಖ್ ಗೆ ತೆರಳುವ ಮೂರನೇ ಮಾರ್ಗವಾಗಿರಲಿದೆ.
ನೀಮು ಪದಮ್ ದರ್ಚಾ ಮಾರ್ಗವಾಗಿ ಮನಾಲಿಯಿಂದ ಲೇಹ್ ಗೆ ಸಂಪರ್ಕ ಕಲ್ಪಿಸಲಿರುವ ಈ ನೂತನ ರಸ್ತೆ ಮೇಲೆ ಪಾಕಿಸ್ತಾನ ಹಾಗೂ ಚೀನಾ ಕಣ್ಣೀಡಲು ಸಾಧ್ಯವಾಗುವುದಿಲ್ಲ. ಈ ಮಾರ್ಗವು ಶತ್ರುಗಳ ಕಣ್ತಪ್ಪಿಸಿ ಸೈನ್ಯ ಹಾಗೂ ಶಸ್ತ್ರಾಸ್ತ್ರ ರವಾನೆ ಮಾಡುವುದು ಸುಲಭವಾಗಲಿದೆ ಎನ್ನಲಾಗಿದೆ.
ಸದ್ಯ ಮನಾಲಿಯಿಂದ ಲೇಹ್ ಯನ್ನು ತಲುಪಲು ಜೋಜಿಲಾ ಪಾಸ್ ಮಾರ್ಗವಿದೆ. ಆದರೆ ಇದು ಸಂಚಾರಕ್ಕೆ ಹೆಚ್ಚು ಸಮಯ ಹಿಡಿಯುವುದರಿಂದ ನೀಮು ಪದಮ್ ದರ್ಚಾ ರಸ್ತೆ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಂದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


