ನನ್ನ ಮಗುವಿನ ಅಪ್ಪ ಶಾಸಕ ಮಹೇಶ್ ನೇಗಿ: ಬೇಕಾದರೆ ಡಿಎನ್ಎ ಪರೀಕ್ಷೆ ಮಾಡಿಸಿ; ಮಹಿಳೆ ಸವಾಲ್
ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿಯ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಮಹಿಳೆಯೊಬ್ಬರು, ತನ್ನ ಮಗುವಿನ ಅಪ್ಪ ನೇಗಿಯೇ ಆಗಿದ್ದು, ಮಗುವಿನ ಡಿಎನ್ಎ ಟೆಸ್ಟ್ ಮಾಡಿಸಿ ಸವಾಲು ಹಾಕಿದ್ದಾರೆ.

ಡೆಹ್ರಾಡೂನ್: ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿಯ ವಿರುದ್ಧ ರೇಪ್ ಕೇಸ್ ದಾಖಲಿಸಿರುವ ಮಹಿಳೆಯೊಬ್ಬರು, ತನ್ನ ಮಗುವಿನ ಅಪ್ಪ ನೇಗಿಯೇ ಆಗಿದ್ದು, ಮಗುವಿನ ಡಿಎನ್ಎ ಟೆಸ್ಟ್ ಮಾಡಿಸಿ ಸವಾಲು ಹಾಕಿದ್ದಾರೆ.ಶಾಸಕ ನೇಗಿ 2016 ಮತ್ತು 2018ರ ನಡುವೆ ಅನೇಕ ಸಲ ತನ್ನ ಮೇಲೆ ಅತ್ಯಾಚಾರವೆಸಗಿರುವ ಬಗ್ಗೆಯೂ ದೂರಿನಲ್ಲಿ ಅವರು ಉಲ್ಲೇಖಿಸಿದ್ದಾರೆ.
ಅತ್ಯಾಚಾರ ದೂರು ದಾಖಲಿಸಿರುವ ಮಹಿಳೆ ವಿವಾಹಿತೆಯಾಗಿದ್ದು, ನೆಹರೂ ಕಾಲನಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದರಲ್ಲಿ ಅತ್ಯಾಚಾರದ ಅಂಶ ಮತ್ತು ಮಗುವಿನ ಡಿಎನ್ಎ ಪರೀಕ್ಷೆ ನಡೆಸುವಂತೆಯೂ ಅವರು ಕೋರಿದ್ದಾರೆ. ವಿವಾಹಿತ ಮಹಿಳೆ ಶಾಸಕ ನೇಗಿಯ ನೆರೆಯವರಾಗಿದ್ದು, 2016ರಲ್ಲಿ ತನ್ನ ತಾಯಿಗೆ ಆರಾಮ ಇಲ್ಲದೇ ಇದ್ದಾಗ ನೆರವು ಕೋರಿ ಶಾಸಕರನ್ನು ಭೇಟಿಯಾಗಿದ್ದರು.
ಇದಾಗಿ, 2016 ಮತ್ತು 2018ರ ನಡುವೆ ಶಾಸಕ ನೇಗಿ ಆಕೆಯನ್ನು ಮುಸ್ಸೋರಿ, ನೈನಿತಾಲ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ಕರೆದೊಯ್ದು ಅನೇಕ ಸಲ ಅತ್ಯಾಚಾರವೆಸಗಿದ್ದಾರೆ. ಈ ವಿಚಾರ ಬಹಿರಂಗ ಪಡಿಸದಂತೆ ನೇಗಿಯವರ ಪತ್ನಿ 25 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದರು ಎಂಬ ಅಂಶವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಡಿಜಿ ಅಶೋಕ್ ಕುಮಾರ್ ತಿಳಿಸಿದ್ದಾರೆ.
ಶಾಸಕರ ಪತ್ನಿ ಕೂಡ ನೆಹರು ಕಾಲನಿ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದು, ಪತಿಯನ್ನು ಮಹಿಳೆಯೊಬ್ಬರು ಬ್ಲ್ಯಾಕ್ಮೇಲ್ ಮಾಡುತ್ತಿರುವುದಾಗಿ ಆರೋಪಿಸಿದ್ಧಾರೆ.
ಎರಡೂ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಡಿಜಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದರು.ಈ ವಿಚಾರವಾಗಿ ಶಾಸಕ ನೇಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈ ರೇಪ್ ಪ್ರಕರಣವೀಗ ರಾಜಕೀಯ ಸಂಚಲನ ಮೂಡಿಸಿದೆ. ಆದರೆ ಈ ಸಂಬಂಧ ಶಾಸಕ ನೇಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


