ಸುಶಾಂತ್ ನ ಸಂಬಂಧಿ, ಶಾಸಕನಿಂದ ಸಂಜಯ್ ರಾವುತ್ ಗೆ ಕಾನೂನು ನೋಟಿಸ್!
ಬಿಹಾರದ ಶಾಸಕರೂ ಆಗಿರುವ ಸುಶಾಂತ್ ಸಿಂಗ್ ರಜಪೂತ್ ನ ಸಹೋದರ ಸಂಬಂಧಿ ಶಿವಸೇನೆ ನಾಯಕ ಸಂಜಯ್ ರಾವುತ್ ಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.

ನವದೆಹಲಿ: ಬಿಹಾರದ ಶಾಸಕರೂ ಆಗಿರುವ ಸುಶಾಂತ್ ಸಿಂಗ್ ರಜಪೂತ್ ನ ಸಹೋದರ ಸಂಬಂಧಿ ಶಿವಸೇನೆ ನಾಯಕ ಸಂಜಯ್ ರಾವುತ್ ಗೆ ಕಾನೂನು ನೋಟಿಸ್ ಜಾರಿಗೊಳಿಸಿದ್ದಾರೆ.
ಶಿವಸೇನೆಯ ಮುಖವಾಣಿಯಲ್ಲಿ ಸಂಜಯ್ ರಾವುತ್ ನಟ ಸುಶಾಂತ್ ಸಿಂಗ್ ಅವರ ಬಗ್ಗೆ ಬರೆದಿದ್ದು, ಸುಶಾಂತ್ ಸಿಂಗ್ ಅವರ ತಂದೆಯೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಸುಶಾಂತ್ ಸಿಂಗ್ ಅವರ ಸೋದರ ಸಂಬಂಧಿ ಸಂಜಯ್ ರಾವುತ್ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ನೊಟೀಸ್ ಕಳಿಸಿದ್ದಾರೆ. ಸುಶಾಂತ್ ಸಿಂಗ್ ಸಾವಿನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸುಶಾಂತ್ ಸಿಂಗ್ ತಮ್ಮ ತಂದೆ ಎರಡನೇ ವಿವಾಹವಾದ ಬಳಿಕ ಅವರೊಂದಿಗೆ ಉತ್ತಮ ಸಂಬಂಧ ಹೊಂದಿರಲಿಲ್ಲ ಎಂದು ಬರೆದಿದ್ದರು.
"ಸಂಜಯ್ ರಾವುತ್ ಓರ್ವ ಜವಾಬ್ದಾರಿಯುತ ಸಂಸತ್ ಸದಸ್ಯ ಹಾಗೂ ಜವಾಬ್ದಾರಿಯುತ ಪಕ್ಷದ ವಕ್ತಾರಾಗಿದ್ದು, ಇಂತಹ ಆಧಾರ ರಹಿತ ನನ್ನ ಕಕ್ಷಿದಾರರಾದ ನೀರಜ್ ಕುಮಾರ್ ಬಬ್ಲು ಅವರು ಸಂಜಯ್ ರಾವುತ್ ಅವರಿಂದ ಇನ್ನು 48 ಗಂಟೆಗಳಲ್ಲಿ ಕ್ಷಮೆಗೆ ಆಗ್ರಹಿಸಿದ್ದಾರೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


