ದೇಶ

ಮೊಬೈಲ್ ಸ್ಫೋಟದಿಂದ ಮನೆಯಲ್ಲಿ ಬೆಂಕಿ: ತಾಯಿ, ಅವಳಿ ಮಕ್ಕಳ ದುರ್ಮರಣ

ಜಿಲ್ಲೆಯ ರಾಯನೂರು ಗ್ರಾಮದ ಮನೆಯೊಂದರಲ್ಲಿ ಫೋನ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೊಬೈಲ್ ಸ್ಫೋಟದಿಂದ ಮನೆಯಲ್ಲಿ ಬೆಂಕಿ: ತಾಯಿ, ಅವಳಿ ಮಕ್ಕಳ ದುರ್ಮರಣ
ಮುತ್ತುಲಕ್ಷ್ಮಿ ಮತ್ತು ಮಕ್ಕಳು
Published On :

ಕರೂರು: ಜಿಲ್ಲೆಯ ರಾಯನೂರು ಗ್ರಾಮದ ಮನೆಯೊಂದರಲ್ಲಿ ಫೋನ್ ಸ್ಫೋಟಗೊಂಡು ಸಂಭವಿಸಿದ ಬೆಂಕಿ ಅವಘಡದಲ್ಲಿ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಇಂದು ಬೆಳಿಗ್ಗೆ ಮನೆಯಿಂದ ಹೊಗೆ ಬರುತ್ತಿರುವದನ್ನು ನೆÉರೆಹೊರೆಯರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ. 

ಪೊಲೀಸರು ಸುಟ್ಟುಹೋದ ಫೋನ್ ಅನ್ನು ವಶಪಡಿಸಿಕೊಂಡಿದ್ದು, ಫೋನ್ ಸ್ಫೋಟಿಸಿದ ನಂತರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಶಂಕಿಸಿದ್ದಾರೆ. 

ಮೃತರನ್ನು ಪತಿಯಿಂದ ಬೇರ್ಪಟ್ಟಿದ್ದ ಮುತ್ತುಲಕ್ಷ್ಮಿ, ಮೂರು ವರ್ಷದ ಇಬ್ಬರು ಅವಳಿ ಮಕ್ಕಳಾದ ದೀಕ್ಷಿತ್ ಮತ್ತು ರಕ್ಷಿತ್ ಎಂದು ಗುರುತಿಸಲಾಗಿದೆ.

ಮುತ್ತುಲಕ್ಷ್ಮಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಾಯಗೊಂಡಿದ್ದ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಮುತ್ತುಲಕ್ಷ್ಮಿ ಅವರು ತೀವ್ರ ಸಾಲದ ಸುಳಿಯಲ್ಲಿ ಸಿಲುಕಿದ್ದು, ಫೋನ್ ಸ್ಫೋಟಿಸಿಕೊಳ್ಳುವುದರ ಮೂಲಕ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.