ದೇಶ

ಗುಜರಾತ್: ಪ್ರತ್ಯೇಕ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ವ್ಯಕ್ತಿ ಶವವಾಗಿ ಪತ್ತೆ

ಎರಡು ದಿನಗಳ ಹಿಂದೆ ಗುಜರಾತ್ ನ ಸೂರತ್ ನಗರದ ಸರ್ಕಾರಿ ಆಸ್ಪತ್ರೆಯ ಕೊವಿಡ್-19 ಪ್ರತ್ಯೇಕ ವಾರ್ಡ್ ನಿಂದತಪ್ಪಿಸಿಕೊಂಡಿದ್ದ ಕೊರೋನಾ ವೈರಸ್ ಸೋಂಕಿತ 50 ವರ್ಷದ ವ್ಯಕ್ತಿ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಜರಾತ್: ಪ್ರತ್ಯೇಕ ವಾರ್ಡ್ ನಿಂದ ತಪ್ಪಿಸಿಕೊಂಡಿದ್ದ ಕೊರೋನಾ ಸೋಂಕಿತ ವ್ಯಕ್ತಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Published On :

ಸೂರತ್: ಎರಡು ದಿನಗಳ ಹಿಂದೆ ಗುಜರಾತ್ ನ ಸೂರತ್ ನಗರದ ಸರ್ಕಾರಿ ಆಸ್ಪತ್ರೆಯ ಕೊವಿಡ್-19 ಪ್ರತ್ಯೇಕ ವಾರ್ಡ್ ನಿಂದ
ತಪ್ಪಿಸಿಕೊಂಡಿದ್ದ ಕೊರೋನಾ ವೈರಸ್ ಸೋಂಕಿತ 50 ವರ್ಷದ ವ್ಯಕ್ತಿ ಗುರುವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ ಮತ್ತು ಸಿಸಿಟಿವಿ ದೃಶ್ಯಗಳ ಪ್ರಕಾರ, ಸೋಂಕಿತ ವ್ಯಕ್ತಿ ಆಸ್ಪತ್ರೆಯ ಕ್ಯಾಂಪಸ್ ನಿಂದ ಹೊರಗೆ ಹೋಗಿಲ್ಲ. ಕ್ಯಾಂಪನ್ ನ ಬೆಂಚ್ ವೊಂದರ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ.

ಈ ವ್ಯಕ್ತಿ ಏಪ್ರಿಲ್ 28ರಂದು ಯಾರಿಗೂ ಕಾಣದಂತೆ ಕೊವಿಡ್-19 ಪ್ರತ್ಯೇಕ ವಾರ್ಡ್ ನಿಂದ ಹೊರಗೆ ಹೋಗಿದ್ದರು. ಸೋಂಕಿತನಾಗಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಆದರೆ ಎರಡು ದಿನಗಳಿಂದ ವ್ಯಕ್ತಿ ಮಾತ್ರ ಪತ್ತೆಯಾಗಿರಲಿಲ್ಲ. ಇಂದು ದಿಢೀರ್ ಅವರ ಶವ ಸಿಕ್ಕಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಚಿಕಿತ್ಸೆಯ ಮಧ್ಯೆ ಆ ವ್ಯಕ್ತಿ ಏಕೆ ಹೊರಗೆ ಹೋದರು ಎಂದು ಇದುವರೆಗೂ ತಿಳಿದು ಬಂದಿಲ್ಲ. ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಉಪ ಪೊಲೀಸ್ ಆಯುಕ್ತೆ ವಿಧಿ ಚೌಧರಿ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.