ದೇಶ

ಕೋವಿಡ್-19 ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯದಿಂದ ಟ್ವಿಟರ್ ಸೇವಾ ಅಳವಡಿಕೆ

ಕೋವಿಡ್-19 ಗೆ ಸಂಬಂಧಿಸಿದ ಸಾರ್ವಜನಿಕರ ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯ ಟ್ವಿಟರ್ ಸೇವಾ ಎಂಬ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ.

ಕೋವಿಡ್-19 ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯದಿಂದ ಟ್ವಿಟರ್ ಸೇವಾ ಅಳವಡಿಕೆ
ಕೋವಿಡ್-19 ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯದಿಂದ ಟ್ವಿಟರ್ ಸೇವೆ
Published On :

ನವದೆಹಲಿ: ಕೋವಿಡ್-19 ಗೆ ಸಂಬಂಧಿಸಿದ ಸಾರ್ವಜನಿಕರ ಪ್ರಶ್ನೆಗಳನ್ನು ಉತ್ತರಿಸಲು ಆರೋಗ್ಯ ಸಚಿವಾಲಯ ಟ್ವಿಟರ್ ಸೇವಾ ಎಂಬ ವಿನೂತನ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. 

ತ್ವರಿತಗತಿಯಲ್ಲಿ ಅತಿ ಹೆಚ್ಚು ಜನರ ಪ್ರಶ್ನೆಗಳಿಗೆ ಉತ್ತರಿಸುವ ಕಾರ್ಯವಿಧಾನಗಳನ್ನು ಆರೋಗ್ಯ ಸಚಿವಾಲಯ ಟ್ವಿಟರ್ ಅಳವಡಿಸಿಕೊಂಡಿದೆ. 

ಕೋವಿಡ್-19 ತಡೆಗೆ ಸರ್ಕಾರ ಕೈಗೊಂಡಿರುವ ಇತ್ತೀಚಿನ ಕ್ರಮಗಳು, ಆರೋಗ್ಯ ಸೇವೆಗಳನ್ನು ಪಡೆಯುವ ಮಾರ್ಗ, ರೋಗ ಲಕ್ಷಣಗಳು ಕಾಣಿಸಿಕೊಂಡವರಿಗೆ ಯಾರನ್ನು ಸಂಪರ್ಕಿಸಬೇಕೆಂಬ ಮಾಹಿತಿ,  ಸಾರ್ವಜನಿಕರ ಅಗತ್ಯತೆಗಳಿಗೆ ಅಧಿಕಾರಿಗಳನ್ನು ಸಂಪರ್ಕಿಸುವುದು ಹೀಗೆ ಹಲವಾರು ವಿಷಯಗಳ ಕುರಿತ ಪ್ರಶ್ನೆಗಳಿಗೆ @CovidIndiaSeva ಗೆ ಟ್ವೀಟ್ ಮಾಡಿ ಆರೋಗ್ಯ ಸಚಿವಾಲಯದ ಟ್ವಿಟರ್ ಸೇವೆಯಲ್ಲಿ ಉತ್ತರ ಪಡೆಯಬಹುದಾಗಿದೆ.  

ಭಾರತ ಸಾಮಾಜಿಕ ಅಂತರ ವಿಧಾನದ ಮೂಲಕ ಕೊರೋನಾ ವಿರುದ್ಧ ಹೋರಾಡುತ್ತಿದ್ದು, ಸಾರ್ವಜನಿಕರ ಪ್ರಶ್ನೆಗಳಿಗೆ, ಅಗತ್ಯತೆಗಳಿಗೆ ಸ್ಪಂದಿಸಲು ಟ್ವಿಟರ್ ಸೇವಾ ಅಳವಡಿಸಿಕೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ. 

ಸಾರ್ವಜನಿಕರು @CovidIndiaSeva ಗೆ ಟ್ವೀಟ್ ಮಾಡಿ ಕೇಳುವ ಪ್ರಶ್ನೆಗಳಿಗೆ ತಜ್ಞರ ತಂಡದಿಂದ ನಿಖರ ಮಾಹಿತಿ, ಉತ್ತರ ಸಿಗಲಿದೆ.  

ಟ್ವಿಟರ್ ಸೇವಾ ಕಾರ್ಯವಿಧಾನವನ್ನು ವಾಣಿಜ್ಯ ಸಚಿವಾಲಯ (@DIPPGOI) ವಿದೇಶಾಂಗ ಸಚಿವಾಲಯ( (@MEAIndia) ಟೆಲಿಕಾಂ ಸಚಿವಾಲಯ (@Dot_India) ಅಂಚೆ, ಎಂಟಿಎನ್ಎಲ್, ಬಿಎಸ್ಎನ್ಎಲ್  ಸಚಿವಾಲ, ಬೆಂಗಳೂರು ಪೊಲೀಸ್, ಉತ್ತರ ಪ್ರದೇಶ ಪೊಲೀಸರು ಅಳವಡಿಸಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.