ಮನೆ ಒಳಗೆ ಬರಬೇಡಿ, ಕೋವಿಡ್ ಟೆಸ್ಟ್ ಮಾಡಿಕೊಳ್ಳುವವರೆಗೂ ಗಂಡನನ್ನೇ ಮನೆಯಿಂದ ಹೊರಹಾಕಿದ್ದ ಪತ್ನಿ!
ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವವರೆಗೂ ಗಂಡನನ್ನೇ ಮನೆಗೆ ಸೇರಿದ ಘಟನೆ ಅಮರಾವತಿಯಲ್ಲಿ ನಡೆದಿದೆ.

ಅಮರಾವತಿ(ಆಂಧ್ರ): ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವವರೆಗೂ ಗಂಡನನ್ನೇ ಮನೆಗೆ ಸೇರಿದ ಘಟನೆ ಅಮರಾವತಿಯಲ್ಲಿ ನಡೆದಿದೆ.
ಆಂಧ್ರದ ನೆಲ್ಲೂರು ಜಿಲ್ಲೆಯ ವೆಂಕಟಗಿರಿ ಈ ಘಟನೆ ನಡೆದಿದ್ದು ಲಾಕ್ ಡೌನ್ ಹಿನ್ನೆಲೆಯಲ್ಲಿ ಪತಿ ನೆಲ್ಲೂರಿನಲ್ಲಿದ್ದ ಚಿನ್ನದ ಅಂಗಡಿಯಲ್ಲೇ ಉಳಿದುಕೊಂಡಿದ್ದರು. ಒಂದು ತಿಂಗಳಿಂದ ಮನೆಯಿಂದ ದೂರವಿದ್ದ ಗಂಡ ಕಳೆದ ಬುಧವಾರ ಮನೆಗೆ ಬಂದಿದ್ದರೂ ಮನೆಗೆ ಸೇರಿಸಿಕೊಳ್ಳದ ಪತ್ನಿ ಟೆಸ್ಟ್ ಮಾಡಿಕೊಂಡು ಬರುವಂತೆ ಪಟ್ಟುಹಿಡಿದಿದ್ದಳು.
ಅಂಗನವಾಡಿಯಲ್ಲಿ ಉಳಿದಿದ್ದ ವ್ಯಕ್ತಿಯನ್ನು ಆರೋಗ್ಯ ಸಿಬ್ಬಂದಿ ಪರೀಕ್ಷೆ ನಡೆಸಿದ್ದು ಪರೀಕ್ಷೆಯಲ್ಲಿ ನೆಗೆಟಿವ್ ಬಂದಿತ್ತು. ನಂತರ ಗಂಡ ಮನೆಯನ್ನು ಸೇರಿಕೊಂಡರು. ಈ ಬಗ್ಗೆ ಪ್ರತಿಕ್ರಿಯಿಸಿದ ಪತ್ನಿ ಮಕ್ಕಳು ಮತ್ತು ನಮ್ಮ ಮನೆಯ ಅಕ್ಕಪಕ್ಕದವರ ಒಳಿತಿಗಾಗಿ ಪರೀಕ್ಷೆ ಮಾಡಿಸಿಕೊಂಡು ಮನೆಗೆ ಬರುವಂತೆ ಒತ್ತಾಯಿಸಿದ್ದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


