ಕೋವಿಡ್ ಎಫೆಕ್ಟ್: ರಾಫೆಲ್ ಫೈಟರ್ ಜೆಟ್ ವಿತರಣೆ 'ಕೆಲ ವಾರಗಳಷ್ಟು' ಮುಂದಕ್ಕೆ
ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್ ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ.

ನವದೆಹಲಿ: ಫ್ರಾನ್ಸ್ ಮತ್ತು ಭಾರತ ಎರಡೂ ರಾಷ್ಟ್ರಗಳಲ್ಲಿ ಕೊರೋನಾವೈರಸ್ ಲಾಕ್‌ಡೌನ್ ಇರುವ ಕಾರಣ ಮೊದಲ ಹಂತದ ರಾಫೆಲ್ ಯುದ್ಧ ವಿಮಾನಗಳ ವಿತರಣೆಯು ಈಗ ಕೆಲವು ವಾರಗಳ ವಿಳಂಬವಾಗಲಿದೆ.
"ಪ್ರಸ್ತುತ, ಲಾಕ್ ಡೌನ್ ಕಾರಣ ವಿತರಣಾ ವೇಳಾಪಟ್ಟಿಯನ್ನು ಕೆಲವು ವಾರಗಳ ಕಾಲ ಮುಂದಕ್ಕೆ ಹಾಕಲಾಗಿದೆ.ದರೆ ಈ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ಐಎಎಫ್ ಮೂಲಗಳು ಇಲ್ಲಿ ತಿಳಿಸಿವೆ. ಫ್ರಾನ್ಸ್‌ನಿಂದ ವಿತರಣೆಯಲ್ಲಿನ ವಿಳಂಬದ ಹೊರತಾಗಿ, ಅಂಬಾಲಾ ವಾಯುನೆಲೆಯಲ್ಲಿ ಇನ್ನೂ ಕೆಲವು ಸಿದ್ಧತೆಗಳು ಪೂರ್ಣಗೊಂಡಿಲ್ಲ, ಇದು ಫ್ರೆಂಚ್ ಮೂಲದ ಫೈಟರ್ ಗಳಿಗಾಗಿ ಮೊದಲ ಸ್ಕ್ವಾಡ್ರನ್ ಅನ್ನು ನಿರ್ಮಿಸಲಿದೆ.
ಈ ಮುನ್ನಿನ ಒಪ್ಪಂದದಂತೆ ವಿಮಾನವು ಮೇ ಅಂತ್ಯದ ವೇಳೆಗೆ ಭಾರತವನ್ನು ತಲುಪಬೇಕಿತ್ತು ಆದರೆ ಈಗ ಕೆಲವು ವಾರಗಳ ವಿಳಂಬವಾಗಲಿದೆ. ಲಾಕ್‌ಡೌನ್‌ಗಳು ಮುಗಿದ ನಂತರವೇ ಅಂತಿಮ ವಿತರಣಾ ವೇಳಾಪಟ್ಟಿ ನಿರ್ಧಾರವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


