ದೇಶ

ಭಾರತೀಯರ ಹೆಚ್ 1ಬಿ ಮತ್ತು ಇತರ ವೀಸಾಗಳ ಅವಧಿ ವಿಸ್ತರಿಸಿ: ಅಮೆರಿಕಕ್ಕೆ ಭಾರತ ಮನವಿ

ಕೊರೋನಾ ವೈರಸ್ ಸಮಸ್ಯೆ ಮುಗಿಯುವವರೆಗೆ ಹೆಚ್-1ಬಿ ಮತ್ತು ಇತರ ವೀಸಾವನ್ನು ಭಾರತೀಯ ನಾಗರಿಕರಿಗೆ ವಿಸ್ತರಿಸುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಭಾರತ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವನ್ನು ಕೋರಿದೆ.

ಭಾರತೀಯರ ಹೆಚ್ 1ಬಿ ಮತ್ತು ಇತರ ವೀಸಾಗಳ ಅವಧಿ ವಿಸ್ತರಿಸಿ: ಅಮೆರಿಕಕ್ಕೆ ಭಾರತ ಮನವಿ
Published On :

ನವದೆಹಲಿ: ಕೊರೋನಾ ವೈರಸ್ ಸಮಸ್ಯೆ ಮುಗಿಯುವವರೆಗೆ ಹೆಚ್-1ಬಿ ಮತ್ತು ಇತರ ವೀಸಾವನ್ನು ಭಾರತೀಯ ನಾಗರಿಕರಿಗೆ ವಿಸ್ತರಿಸುವ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಭಾರತ ಸರ್ಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರವನ್ನು ಕೋರಿದೆ.

ಹೆಚ್1ಬಿ ವೀಸಾ ಹೊಂದಿರವವರ ಸೇವೆಯನ್ನು ರದ್ದುಗೊಳಿಸಬೇಕೆಂದು ಅಮೆರಿಕಾದಲ್ಲಿರುವ ಕೆಲವು ಕಂಪೆನಿಗಳು ಆದೇಶ ಹೊರಡಿಸಿವೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ಮನವಿ ಮಾಡಿದೆ ಎಂದು ಸರ್ಕಾರದ ಅಧಿಕೃತ ಮೂಲಗಳು ತಿಳಿಸಿವೆ.

ಅಮೆರಿಕ ಸರ್ಕಾರದಿಂದ ಹೆಚ್-1ಬಿ ವೀಸಾ ಬಗ್ಗೆ ಯಾವುದೇ ಆದೇಶ ಬಾರದಿದ್ದರೂ ಕೂಡ ಹೆಚ್ 1ಬಿ ವೀಸಾ ಅಡಿಯಲ್ಲಿ ಭಾರತೀಯ ನೌಕರರನ್ನು ಕೆಲಸದಿಂದ ತೆಗೆದುಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ಶೃಂಗ್ಲಾ ಅಮೆರಿಕದ ಉಪ ಕಾರ್ಯದರ್ಶಿ ಸ್ಟೆಫನ್ ಬೈಗಮ್ ಅವರ ಜೊತೆ ದೂರವಾಣಿ ಮೂಲಕ ಮಾತನಾಡಿ ಮನವಿ ಮಾಡಿಕೊಂಡಿದ್ದಾರೆ.

ಅಮೆರಿಕದಲ್ಲಿ ಹೆಚ್ 1ಬಿ ವೀಸಾ ಅಡಿಯಲ್ಲಿ 3 ಲಕ್ಷಕ್ಕೂ ಅಧಿಕ ಭಾರತೀಯರು ಉದ್ಯೋಗದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.