ಕೋವಿಡ್-19: ಭಾರತಕ್ಕೆ 2.9 ಮಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ನೀಡಿದ ಅಮೆರಿಕಾ
ಕೊರೋನಾವೈರಸ್ ನಿಗ್ರಹಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿರುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ 2.9 ಮಿಲಿಯನ್ ಮೊತ್ತದ ನೆರವಿನ ಪ್ಯಾಕೇಜ್ ನ್ನು ಅಮೆರಿಕಾ ಕೊಡುಗೆಯಾಗಿ ನೀಡಿದೆ.

ನವದೆಹಲಿ:ಕೊರೋನಾವೈರಸ್ ನಿಗ್ರಹಕ್ಕೆ ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿರುವಂತೆ ನರೇಂದ್ರ ಮೋದಿ ಸರ್ಕಾರಕ್ಕೆ ಸಹಾಯ ಮಾಡುವ ನಿಟ್ಟಿನಲ್ಲಿ ಭಾರತಕ್ಕೆ 2.9 ಮಿಲಿಯನ್ ಮೊತ್ತದ ನೆರವಿನ ಪ್ಯಾಕೇಜ್ ನ್ನು ಅಮೆರಿಕಾ ಕೊಡುಗೆಯಾಗಿ ನೀಡಿದೆ.
ಕೋವಿಡ್ -19 ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕಾ ಏಜೆನ್ಸಿ ಮೂಲಕ 2. 9 ಬಿಲಿಯನ್ ಡಾಲರ್ ಮೊತ್ತದ ನೆರವನ್ನು ನೀಡುವುದಾಗಿ ಅಮೆರಿಕಾ ಸರ್ಕಾರ ಮಾರ್ಚ್ 28 ರಂದು ಘೋಷಿಸಿತ್ತು.
ಕಳೆದ 20 ವರ್ಷಗಳಲ್ಲಿ ಅಮೆರಿಕಾ ಭಾರತಕ್ಕೆ ಒದಗಿಸಿದ 1. 4 ಬಿಲಿಯನ್ ಡಾಲರ್ ಮೊತ್ತದ ಆರೋಗ್ಯ ನೆರವು ಮತ್ತು ಒಟ್ಟಾರೇ ಸುಮಾರು 3 ಬಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ಉಭಯ ರಾಷ್ಟ್ರಗಳ ನಡುವೆ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲಿದೆ ಎಂದು ಭಾರತದಲ್ಲಿನ ಅಮೆರಿಕಾದ ರಾಯಬಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ನಿಧಿಯಿಂದ ಕೋವಿಡ್-19 ಸೋಂಕು ಹರಡದಂತೆ ತಡೆಗಟ್ಟಲು ಭಾರತಕ್ಕೆ ನೆರವಾಗಲಿದೆ. ಸೋಂಕು ಪೀಡಿತರಿಗೆ ಚಿಕಿತ್ಸೆ ಒದಗಿಸಲು ಮತ್ತು ರೋಗ ನಿಯಂತ್ರಣ ನಿಟ್ಟಿನಲ್ಲಿ ಅಗತ್ಯ ಸಾಧನ ಸಲಕರಣೆಗಳ ಪೂರೈಕೆಗೆ ನೆರವಾಗಲಿದೆ ಎಂದು ಅವರು ಹೇಳಿದ್ದಾರೆ.
ಇದಲ್ಲದೇ ಸಾಂಕ್ರಾಮಿಕ ರೋಗದ ತಡೆಗಾಗಿ ಏಶಿಯನ್ ಸದಸ್ಯ ರಾಷ್ಟ್ರಗಳಿಗೆ ಅಮೆರಿಕಾದ ಅಂದಾಜು 18. 3 ಮಿಲಿಯನ್ ಡಾಲರ್ ಮೊತ್ತದ ನೆರವಿನ ಪ್ಯಾಕೇಜ್ ನೀಡಿರುವುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


