ಕೊರೋನಾ ವೈರಸ್, ಲಾಕ್ ಡೌನ್ ಪರಿಣಾಮ: ಲಕ್ಷಾಂತರ ಉದ್ಯೋಗಕ್ಕೆ ಕುತ್ತು!
ಕೊರೋನಾ ವೈರಸ್ ನಿಂದ ಲಾಕ್ ಡೌನ್ ಘೋಷಣೆಯಾಗಿರುವ ಪರಿಣಾಮ, ಹಲವು ಉದ್ದಿಮೆ, ಉದ್ಯೋಗಳ ಮೇಲೆ ತಟ್ಟುತ್ತಿದ್ದು ಟೆಕ್ಸ್ ಟೈಲ್ಸ್, ಸಿದ್ಧ ಉಡುಪು ಕ್ಷೇತ್ರದ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಎಚ್ಚರಿಕೆ ನೀಡಿದ್ದಾರೆ ತಜ್ಞರು.

ಕೊರೋನಾ ವೈರಸ್ ನಿಂದ ಲಾಕ್ ಡೌನ್ ಘೋಷಣೆಯಾಗಿರುವ ಪರಿಣಾಮ, ಹಲವು ಉದ್ದಿಮೆ, ಉದ್ಯೋಗಳ ಮೇಲೆ ತಟ್ಟುತ್ತಿದ್ದು ಟೆಕ್ಸ್ ಟೈಲ್ಸ್, ಸಿದ್ಧ ಉಡುಪು ಕ್ಷೇತ್ರದ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಬರುವ ಎಚ್ಚರಿಕೆ ನೀಡಿದ್ದಾರೆ ತಜ್ಞರು.
ವಿದೇಶಗಳಿಂದ, ಪ್ರಮುಖವಾಗಿ ಅಮೆರಿಕ, ಯುರೋಪ್ ನಿಂದ ಬರುತ್ತಿದ್ದ ಆರ್ಡರ್ ಗಳು ಲಾಕ್ ಡೌನ್ ನಿಂದ ರದ್ದುಗೊಂಡಿದೆ. ಇತ್ತ ಲಾಕ್ ಡೌ ನಿಂದ ಕಾರ್ಮಿಕರೂ ನಗರ ಪ್ರದೇಶಗಳಿಂದ ವಾಪಸ್ ತಮ್ಮ ಊರುಗಳಿಗೆ ತೆರಳಿರಿವುದು ಉದ್ಯಮ ಮತ್ತಷ್ಟು ಕುಂಠಿತಗೊಂಡಿದೆ.
ಕಾರ್ಖಾನೆಗಳು ಮುಚ್ಚಿರುವ ಪರಿಣಾಮ ಕಾರ್ಮಿಕರು ವಾಪಸ್ಸಾಗುತ್ತಿದ್ದು, ಬೇಡಿಕೆಯೂ ಕುಸಿಯುತ್ತದೆ. ಪರಿಸ್ಥಿತಿ ನಿಭಾಯಿಸುವುದಕ್ಕೆ ಕೇಂದ್ರ ಸರ್ಕಾರ ಶೀಘ್ರವೇ ಪ್ಯಾಕೇಜ್ ಘೋಷಣೆ ಮಾಡದೇ ಇದ್ದರೆ ಲಕ್ಷಾಂತರ ಉದ್ಯೋಗಗಳಿಗೆ ಕುತ್ತು ಉಂಟಾಗಲಿದೆ ಎಂದು ಟೆಕ್ಸ್ ಟೈಲ್ಸ್ ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಶೇ.70 ರಷ್ಟು ಟೆಕ್ಸ್ ಟೈಲ್ಸ್ ಯುನಿಟ್ ಗಳು ಸಣ್ಣ, ಅತಿ ಸಣ್ಣ, ಮಧ್ಯಮ ಕೈಗಾರಿಕೆಗಳ ವ್ಯಾಪ್ತಿಗೆ ಬರಲಿದೆ. ಕಾರ್ಮಿಕ ವೆಚ್ಚವೇ ಉತ್ಪನ್ನ ವೆಚ್ಚಗಳ ಬಹುಪಾಲನ್ನು ಆವರಿಸಿವೆ ಎನ್ನುತ್ತಾರೆ ತಜ್ಞರು. ಸಿದ್ಧ ಉಡುಪು ರಫ್ತು ಉತ್ತೇಜನಾ ಮಂಡಳಿ (ಎಇಪಿಸಿ)ಯ ಅಧ್ಯಕ್ಷ ಎ ಶಕ್ತಿವೇಲ್ ಈ ಬಗ್ಗೆ ಮಾತನಾಡಿದ್ದು ಪ್ರಧಾನಿ ನರೇಂದ್ರ ಮೋದಿಗೂ ಪತ್ರ ಬರೆದಿದ್ದಾರೆ. "ಒಂದು ವೇಳೆ ಸಿದ್ಧ ಉಡುಪು ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡದೇ ಇದ್ದಲ್ಲಿ 12.9 ಮಿಲಿಯನ್ ಜನರಿಗೆ ಉದ್ಯೋಗ ನೀಡಿರುವ ಉದ್ಯಮ ನಿಧಾನಗತಿಯಲ್ಲಿ ಸಮಸ್ಯೆಯಲ್ಲಿ ಸಿಲುಕಿಕೊಳ್ಳಲಿದೆ"
ಸಿದ್ಧ ಉಡುಪು ಇಂಡಸ್ಟ್ರಿ ಸಹ ಸೀಸನಲ್ ಉದ್ಯಮವಾಗಿದ್ದು, ಸಿದ್ಧ ಉಡುಪುಲು ಕಾಲಕ್ಕೆ ತಕ್ಕಂತೆ ನಿರ್ದಿಷ್ಟ ವಿನ್ಯಾಸ, ನಿರ್ದಿಷ್ಟ ಫ್ಯಾಷನ್ ನ್ನು ಹೊಂದಿರುತ್ತವೆ, ಇವುಗಳ ರಫ್ತನ್ನು ರದ್ದುಮಾಡಿದರೆ ಮುಂದಿನ ವರ್ಷಕ್ಕೆ ಅವುಗಳಿಗೆ ಬೆಲೆ ಇರುವುದಿಲ್ಲ ಎಂದು ಎ ಶಕ್ತಿವೇಲ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


