ಕೋವಿಡ್ -19: ಧಾರಾವಿಯಲ್ಲಿ ಎರಡನೇ ಪ್ರಕರಣ ಪತ್ತೆ, ಪೌರ ಕಾರ್ಮಿಕನಿಗೆ ಸೋಂಕು
ಏಷ್ಯಾದ ಅತಿದೊಡ್ಡ ಕೊಳಚೆ ಪ್ರದೇಶ ಮುಂಬೈಯ ಧಾರಾವಿಯಲ್ಲಿ ಎರಡನೇ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದೆ. 52 ವರ್ಷದ ಪೌರ ಕಾರ್ಮಿಕರೊಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ. ವೊಲ್ರಿ ಪ್ರದೇಶದಲ್ಲಿ ವಾಸವಾಗಿದ್ದ ಈತನನ್ನು ಧಾರಾವಿಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ನೇಮಿಸಲಾಗಿತ್ತು ಎಂದು ಬಿಎಂಸಿ ಹೇಳಿದೆ.

ಮುಂಬೈ: ಏಷ್ಯಾದ ಅತಿದೊಡ್ಡ ಕೊಳಚೆ ಪ್ರದೇಶ ಮುಂಬೈಯ ಧಾರಾವಿಯಲ್ಲಿ ಎರಡನೇ ಕೊರೋನಾ ಸೋಂಕು ಪ್ರಕರಣ ಕಂಡುಬಂದಿದೆ. 52 ವರ್ಷದ ಪೌರ ಕಾರ್ಮಿಕರೊಬ್ಬರಲ್ಲಿ ಈ ಸೋಂಕು ದೃಢಪಟ್ಟಿದೆ. ವೊಲ್ರಿ ಪ್ರದೇಶದಲ್ಲಿ ವಾಸವಾಗಿದ್ದ ಈತನನ್ನು ಧಾರಾವಿಯಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ನೇಮಿಸಲಾಗಿತ್ತು ಎಂದು ಬಿಎಂಸಿ ಹೇಳಿದೆ.
ಸೋಂಕಿನ ಲಕ್ಷಣಗಳು ಕಂಡುಬಂದ ನಂತರ ಚಿಕಿತ್ಸೆ ಪಡೆಯುವಂತೆ ಬಿಎಂಸಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದ್ದು, ಅವರ ಕುಟುಂಬ ಸದಸ್ಯರು ಹಾಗೂ 23 ಮಂದಿ ಸಹೋದ್ಯೋಗಿಗಳನ್ನು ಕ್ವಾರಂಟೈನಲ್ಲಿ ಇರಲು ಸೂಚಿಸಲಾಗಿದೆ.
ಧಾರಾವಿ ನಗರದಲ್ಲಿ ಕೊರೋನಾವೈರಸ್ ನಿಂದಾಗಿ 46 ವರ್ಷದ ವ್ಯಕ್ತಿಯೊಬ್ಬ ಬುಧವಾರ ಸಂಜೆ ನಿಧನರಾಗಿದ್ದರು. ಇದರಿಂದ ಆತಂಕಗೊಂಡ ಮಹಾನಗರ ಪಾಲಿಕೆ ಆತ ವಾಸಿಸುತ್ತಿದ್ದ ಕಟ್ಟಡಕ್ಕೆ ಬೀಗ ಹಾಕಿತ್ತು.
ಮೃತ ವ್ಯಕ್ತಿ ಏಲ್ಲಿಯೂ ಪ್ರವಾಸಕ್ಕೆ ತೆರಳಿರಿಲ್ಲ. ಕೊಳೆಗೇರಿ ಪುನರ್ವಸತಿ ಪ್ರಾಧಿಕಾರ ಯೋಜನೆಯಡಿ ನಿರ್ಮಾಣಗೊಂಡ ಕಟ್ಟಡದಲ್ಲಿ ಆತ ವಾಸಿಸುತ್ತಿದ್ದ ಎಂದು ಬೃಹನ್ ಮುಂಬೈ ಮುನ್ಸಿಫಲ್ ಕಾರ್ಪೋರೇಷನ್ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


