ಚಿದಂಬರಂ-ಇಂದ್ರಾಣಿ ಭೇಟಿ ಸತ್ಯ, ಆದರೆ ಸಾಕ್ಷ್ಯ ನಾಶಪಡಿಸಲಾಗಿದೆ: ಸಿಬಿಐ
ಅಕ್ರಮ ಹಣ ವರ್ಗಾವಣೆ ಮತ್ತು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಇಂದ್ರಾಣಿ ಮುಖರ್ಜಿ ಅವರನ್ನು ಭೇಟಿಯಾಗಿದ್ದು ನಿಜ. ಆದರೆ ಈ ಕುರಿತ ದಾಖಲೆಗಳನ್ನು ನಾಶ ಪಡಿಸಲಾಗಿದೆ ಎಂದು ಹೇಳಿದ್ದಾರೆ.

ನವದೆಹಲಿ: ಅಕ್ರಮ ಹಣ ವರ್ಗಾವಣೆ ಮತ್ತು ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಇಂದ್ರಾಣಿ ಮುಖರ್ಜಿ ಅವರನ್ನು ಭೇಟಿಯಾಗಿದ್ದು ನಿಜ. ಆದರೆ ಈ ಕುರಿತ ದಾಖಲೆಗಳನ್ನು ನಾಶ ಪಡಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ನಿನ್ನೆ ನಡೆದ ವಿಚಾರಣೆಯಲ್ಲಿ ತಮ್ಮ ಹೇಳಿಕೆ ದಾಖಲಿಸಿದ ಸಿಬಿಐ ಅಧಿಕಾರಿಗಳು, ಚಿದಂಬರಂ ಅವರ ಕಚೇರಿಯ ಸಂದರ್ಶಕರ ನೋಂದಾವಣಿ ಪುಸ್ತಕ (visitors register)ವನ್ನು ನಾಶ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ, ಅವಧಿ ಮೀರಿದ ಹಿನ್ನಲೆಯಲ್ಲಿ ನೋಂದಾವಣಿ ಪುಸ್ತಕವನ್ನು ನಾಶ ಮಾಡಲಾಯಿತು ಎಂದು ಹೇಳುತ್ತಾರೆ. ಆದರೆ 2017ರಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಾದಾಗಲೇ ನೋಂದಾವಣಿ ಪುಸ್ತಕವನ್ನು ನಾಶ ಮಾಡಲಾಗಿದೆ ಎಂದು ಸಿಬಿಐ ನ್ಯಾಯಮೂರ್ತಿ ಸುರೇಶ್ ಕೈತ್ ಅವರ ಬಳಿ ತಮ್ಮ ವಾದ ಮಂಡಿಸಿದೆ.
ಅಂತೆಯೇ ಚಿದಂಬರಂ ಮತ್ತು ಇಂದ್ರಾಣಿ ಭೇಟಿ ಸತ್ಯವಾಗಿದ್ದು, ಈ ಕುರಿತಂತೆ ಇಂದ್ರಾಣಿ ಮತ್ತು ಅವರ ಪತಿ ಪೀಟರ್ ಮುಖರ್ಜಿ ತಂಗಿದ್ದ ಹೊಟೆಲ್ ನ ದಾಖಲಾತಿಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ನೀಡಲಾಗಿದೆ, ಅಲ್ಲದೆ ಚಿದಂಬರಂ ಕಚೇರಿಗೆ ಇಂದ್ರಾಣಿ ಮತ್ತು ಪೀಟರ್ ಬಂದು ಹೋಗಿದ್ದ ಕಾರಿನ ವಿವರ ಕೂಡ ನೀಡಲಾಗಿದೆ. ಈ ಭೇಟಿ ಸಂದರ್ಭದಲ್ಲೇ ಇಂದ್ರಾಣಿ ತಮ್ಮ ಪುತ್ರನ ಕುರಿತು ಚಿದಂಬರಂರೊಂದಿಗೆ ಚರ್ಚೆ ನಡೆಸಿದ್ದರು ಎಂದು ಸಿಬಿಐ ಪರ ವಕೀಲ ಮೆಹ್ತಾ ತಮ್ಮ ವಾದ ಮಂಡಿಸಿದರು.
2017ರಲ್ಲಿ ಚಿದಂಬರಂ ವಿರುದ್ಧ ಎಫ್ ಐಆರ್ ದಾಖಲಾದಾಗ ಚಿದಂಬರಂ ಕಚೇರಿಯಲ್ಲಿದ್ದ ವಿಸಿಟರ್ಸ್ ರಿಜಿಸ್ಟರ್ ಅನ್ನು ನಾಶ ಮಾಡಲಾಗಿದೆ ಎಂದು ಸಿಬಿಐ ಪರ ವಕೀಲ ಮೆಹ್ತಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


