ಒಂದೇ ಐಡಿ ಕಾರ್ಡ್ ನಲ್ಲಿ ಆಧಾರ್, ಡಿಎಲ್, ಪಾಸ್ ಪೋರ್ಟ್: ಅಮಿತ್ ಶಾ ಹೊಸ ಚಿಂತನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಆಧಾರ್ ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ...

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೋಮವಾರ ಆಧಾರ್ ಗೆ ಗುಡ್ ಬೈ ಹೇಳುವ ಸುಳಿವು ನೀಡಿದ್ದು, ಆಧಾರ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಹಾಗೂ ಬ್ಯಾಂಕ್ ಖಾತೆ ಒಳಗೊಂಡ ಬಹು ಉಪಯೋಗಿ ಕಾರ್ಡ್ ಅನ್ನು ಭಾರತೀಯರಿಗೆ ನೀಡುವ ಬಗ್ಗೆ ಮಾತನಾಡಿದ್ದಾರೆ.
2021ರ ಜನಗಣತಿ ಮೊಬೈಲ್ ಅಪ್ಲಿಕೇಶನ್ ಮೂಲಕ ನಡೆಯಲಿದೆ ಎಂದು ಸಹ ಅಮಿತ್ ಶಾ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ಇಲ್ಲಿಯವರೆಗೆ ಪೇಪರ್ ಮೂಲಕ ಜನಗಣತಿ ಮಾಡಲಾಗುತಿತ್ತು. ಆದರೆ 2021ರಲ್ಲಿ ಮೊಬೈಲ್ ಅಪ್ಲಿಕೇಶನ್ ಮೂಲಕ ಜನಗಣತಿ ಮಾಡಲಾಗುವುದು ಎಂದು ತಿಳಿಸಿದರು.
2021ರ ಸೆನ್ಸಸ್ ಗೆ ಒಂದು ಮೊಬೈಲ್ ಅಪ್ಲಿಕೇಶನ್ ಬಳಕೆಯಾಗಲಿದೆ. ಇಲ್ಲಿಯವರೆಗೆ ನಡೆಯುತ್ತಿದ್ದ ಪೇಪರ್ ಸಮೀಕ್ಷೆಯನ್ನು ಈ ಅಪ್ಲಿಕೇಶನ್ ಡಿಜಿಟಲ್ ಸಮೀಕ್ಷೆಯನ್ನಾಗಿ ಪರಿವರ್ತನೆ ಮಾಡಲಿದೆ ಎಂದರು.
ಆಧಾರ್, ಡಿಎಲ್, ವೋಟರ್ ಐಡಿ ಕಾರ್ಡ್, ಬ್ಯಾಂಕ್ ಖಾತೆ, ಪಾಸ್ ಪೋರ್ಟ್ ಗಳನ್ನು ಒಳಗೊಂಡ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್) ಇದ್ದರೆ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗುತ್ತವೆ ಎಂದು ಶಾ ಅಭಿಪ್ರಾಯಪಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


