ನಾಳೆಯಿಂದ ಪ್ರಧಾನಿ ಮೋದಿ ಅಮೆರಿಕ ಪ್ರವಾಸ: ಸಿಇಒಗಳೊಂದಿಗೆ ದುಂಡುಮೇಜಿನ ಸಭೆ
ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ನಾಳೆಯಿಂದ ಶುರುವಾಗಲಿದ್ದು,ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಮುಖ ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕ ಪ್ರವಾಸ ನಾಳೆಯಿಂದ ಶುರುವಾಗಲಿದ್ದು,ಆರ್ಥಿಕ ಮತ್ತು ಇಂಧನ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಪ್ರಮುಖ ಸಿಇಒಗಳೊಂದಿಗೆ ಮಹತ್ವದ ದುಂಡುಮೇಜಿನ ಸಭೆ ನಡೆಸಲು ಭರ್ಜರಿ ತಯಾರಿ ನಡೆದಿದೆ.
ಇದರ ಜೊತೆಗೆ ಹೂಸ್ಟನ್‌ನಲ್ಲಿ ನಡೆಯುವ 'ಹೌಡಿ ಮೋದಿ' ಸಮಾವೇಶ ಜೊತೆಗೆ ವಿಶ್ವಸಂಸ್ಥೆಯಲ್ಲೂ ಇದೇ 27 ರಂದು ಅವರು ಭಾಷಣ ಮಾಡಲಿದ್ದಾರೆ. ಮೋದಿ-ಟ್ರಂಪ್ ದ್ವಿಪಕ್ಷೀಯ ಸಭೆ 24 ರಂದು ನ್ಯೂಯಾರ್ಕ್‌ನಲ್ಲಿ ನಡೆಯುವ ಸಾಧ್ಯತೆ ಇದೇ ಎಂದೂ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ನಾಳೆ ಹೂಸ್ಟನ್‌ನಲ್ಲಿ ನಡೆಯುವ ಇಂಧನ ಕ್ಷೇತ್ರದ ಮುಖ್ಯ ಕಾರ್ಯನಿರ್ವಾಹಕರೊಂದಿಗೆ ದುಂಡು ಮೇಜಿನ ಸಭೆಯಲ್ಲಿ ಮೋದಿ ಅವರು ವಿನ್ಮಾರ್ ಇಂಟರ್‌ನ್ಯಾಷನಲ್, ಚೆನಿಯರ್ ಎನರ್ಜಿ, ಡೊಮಿನಿಯನ್ ಎನರ್ಜಿ, ಐಎಚ್‌ಎಸ್ ಮಾರ್ಕಿಟ್ ಮುಂತಾದ ಕಂಪನಿಗಳ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಇಂಡೋ-ಅಮೆರಿಕ ವ್ಯಾಪಾರದಲ್ಲಿ ಹೊಸ ಚೇತರಿಕೆ ಹೊರಹೊಮ್ಮಿದೆ ಮತ್ತು ಭಾರತ 4 ಬಿಲಿಯನ್ ಮೌಲ್ಯದ ತೈಲ ಮತ್ತು ಅನಿಲವನ್ನು ಆಮದು ಮಾಡಿಕೊಳ್ಳುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


