ದೇಶ

ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ದಂಡ ಹಾಕದೆ ಕೈಕಟ್ಟಿ ಕುಳಿತ ಪೊಲೀಸರು ಯಾಕೆ ಗೊತ್ತ?

ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ಆತನಿಗೆ ದಂಡ ವಿಧಿಸಲಾಗದೆ ಸಂಚಾರಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ದಂಡ ಹಾಕದೆ ಕೈಕಟ್ಟಿ ಕುಳಿತ ಪೊಲೀಸರು ಯಾಕೆ ಗೊತ್ತ?
ಝಾಕಿರ್ ಮೆಮೂನ್
Published On :

ಗಾಂಧಿನಗರ: ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು ಆತನಿಗೆ ದಂಡ ವಿಧಿಸಲಾಗದೆ ಸಂಚಾರಿ ಪೊಲೀಸರು ಇಕ್ಕಟ್ಟಿಗೆ ಸಿಲುಕಿರುವ ಪರಿಸ್ಥಿತಿ ನಿರ್ಮಾಣವಾಗಿದೆ. 

ಗುಜರಾತ್ ನ ಗಾಂಧಿನಗರದಲ್ಲಿ ಪೊಲೀಸರು ಅಹಮದಾಬಾದ್ ಮೂಲದ ಝಾಕಿರ್ ಮೆಮೂನ್ ಹೆಲ್ಮೆಟ್ ಹಾಕದೆ ತಿರುಗುತ್ತಿದ್ದರು. ದಂಡ ವಿಧಿಸಲಾಗದೆ ಅಸಹಾಯಕರಾಗಿದ್ದಾರೆ. ಅದಕ್ಕೆ ಕಾರಣ ಝಾಕಿಯ ತಲೆ. ಹೌದು ಆತನ ತಲೆ ದೊಡ್ಡದಾಗಿದ್ದು ಅದಕ್ಕೆ ಹೊಂದಾಣಿಕೆಯಾಗುವ ಹೆಲ್ಮೆಟ್ ಸಿಗುತ್ತಿಲ್ಲ. 

ಹೀಗಾಗಿ ಝಾಕಿರ್ ಹೆಲ್ಮೆಟ್ ಇಲ್ಲದೆ ತಿರುಗುತ್ತಿದ್ದಾನೆ. ಇನ್ನು ಸಂಚಾರಿ ಪೊಲೀಸರು ಆತನನ್ನು ತಡೆದು ನಿಲ್ಲಿಸಿದಾಗ ಕೆಲ ಹೆಲ್ಮೆಟ್ ಗಳನ್ನು ಆತನಿಗೆ ಧರಿಸಲು ಸೂಚಿಸಿದರು. ಯಾವ ಹೆಲ್ಮೆಟ್ ಸಹ ಹೊಂದಾಣಿಕೆಯಾಗದ ಹಿನ್ನೆಲೆಯಲ್ಲಿ ದಂಡ ವಿಧಿಸದ ಸವಾರನನ್ನು ಬಿಟ್ಟು ಕಳುಹಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.