ಆರ್ ಎಸ್ ಎಸ್ ಇಲ್ಲದಿದ್ದರೇ ಹಿಂದೂಸ್ತಾನವೇ ಇರುತ್ತಿರಲಿಲ್ಲ: ಸತೀಶ್ ಪೂನಿಯಾ
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ಶಕ್ತಿಶಾಲಿ ಚಳವಳಿಯಾಗಿದ್ದು, ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಜಸ್ತಾನ ಬಿಜೆಪಿ ಮುಖಂಡ ಘಟಕದ ನೂತನ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಒಂದು ಶಕ್ತಿಶಾಲಿ ಚಳವಳಿಯಾಗಿದ್ದು, ಭಾರತ ಮಾತ್ರವಲ್ಲದೆ ಇಡೀ ವಿಶ್ವವನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಾಜಸ್ತಾನ ಬಿಜೆಪಿ ಮುಖಂಡ ಘಟಕದ ನೂತನ ಅಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.
ಆರೆಸ್ಸೆಸ್ ಹಿನ್ನೆಲೆಯ ಪೂನಿಯಾ ಅವರನ್ನು ಶನಿವಾರ ರಾಜ್ಯದ ಬಿಜೆಪಿ ನೂತನ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ವೇಳೆ ಅವರು ಸಂಘದ ಬಗ್ಗೆ ಶ್ಲಾಘನೆಯ ಮಳೆ ಸುರಿಸಿದ್ದಾರೆ.
ಆರೆಸ್ಸೆಸ್ ಎಂಬುದು ಒಂದು ಪದವಲ್ಲ, ಅದೊಂದು ಚಳವಳಿ. ನನ್ನ ಪ್ರಕಾರ ಆರೆಸ್ಸೆಸ್ ಇಲ್ಲದಿದ್ದರೆ ಹಿಂದೂಸ್ಥಾನವೇ ಇರುತ್ತಿರಲಿಲ್ಲ. ಆರೆಸ್ಸೆಸ್‌ನಿಂದಾಗಿಯೇ ಇಂದು 'ಕೇಸರಿ'ಗೆ ಎಲ್ಲೆಡೆ ಇಷ್ಟು ದೊಡ್ಡ ಪ್ರಮಾಣದ ಗೌರವ ಸಿಗುತ್ತಿದೆ,'' ಎಂದಿದ್ದಾರೆ.
ಐತಿಹಾಸಿಕ ಸತ್ಯಗಳನ್ನು ಮುಚ್ಚಿಡಲು ಎಂದಿಗೂ ಸಾಧ್ಯವಿಲ್ಲ. ದೇಶ ವಿಭಜನೆಗೆ ಕಾರಣವಾದವರು ಯಾರು? ಮೊಘಲರು ಮತ್ತು ಬ್ರಿಟಿಷರ ಜತೆ ಯಾರು ಹೊಂದಾಣಿಕೆಯನ್ನು ಹೊಂದಿದ್ದರು ಎಂದು ಕಾಂಗ್ರೆಸ್ ಪಕ್ಷವನ್ನು ಹೆಸರಿಸದೇ ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


