56 ಇಂಚಿನ ಮೋದಿಗೆ ಚಿದಂಬರಂ ತಡೆಯುವ ಶಕ್ತಿ ಇಲ್ಲ-ಕಾರ್ತಿ ಚಿದಂಬರಂ
ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಇಂದು 74ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ತಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿ: ಐಎನ್ ಎಕ್ಸ್ ಮಾಧ್ಯಮ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರಿಗೆ ಇಂದು 74ನೇ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾರ್ತಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
' ಇಂದಿಗೆ ನಿಮ್ಮಗೆ 74 ವರ್ಷ, ನಂಬರ್ 56!!! ನಿಮ್ಮನ್ನು ತಡೆಯಲು ಸಾಧ್ಯವಿಲ್ಲ.ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ.ನೀವು ಜೈಲಿನಿಂದ ಹೊರಬಂದು ನಮ್ಮೆಲ್ಲರೊಂದಿಗೆ ಕೇಕ್ ಕತ್ತರಿಸಬೇಕೆಂದು ಆಶಿಸುವುದಾಗಿ ಕಾರ್ತಿ ಚಿದಂಬರಂ ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ನಿಮ್ಮ ಉತ್ಸಾಹ ಎಂತಹದ್ದು ಎಂಬುದು ಗೊತ್ತಿದೆ. ನಿಮ್ಮನ್ನು ನೋಡಲು ಕಾತುರರಿಂದ ಇರುವುದಾಗಿ ಹೇಳಿರುವ ಕಾರ್ತಿ, ಚಂದ್ರಯಾನ-2 ಸಂದರ್ಭದಲ್ಲಿ ನಾಟಕೀಯತೆ ಹೆಚ್ಚಾಗಿತ್ತು. ಲ್ಯಾಂಡರ್ ಸಂಪರ್ಕ ಕಳೆದುಕೊಂಡದ್ದು ನಾಟಕೀಯತೆ ಇಲ್ಲ. ತದನಂತರ ದೊಡ್ಡ ಡ್ರಾಮ ನಡೆಯಿತು ಎಂದಿದ್ದಾರೆ.
ಇಸ್ರೋ ಮುಖ್ಯಸ್ಥ ಡಾ. ಶಿವನ್ ಸೇರಿದಂತೆ ಕನ್ಯಾಕುಮಾರಿಯಿಂದ ಬಂದಿದ್ದ ನಮ್ಮ ಎಲ್ಲ ತಮಿಳಿಯನ್ನರು ಬೇಸರದಲ್ಲಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಹಿಡಿದು ಸಂತೈಯಿಸುವ ನಾಟಕವಾಡುತ್ತಿದ್ದರು ವಿಮಾನಯಾನ ಸಹಸ್ರಾರು ವರ್ಷಗಳ ಹಿಂದೆಯೇ ಸೃಷ್ಟಿಯಾಗಿದೆಯ ಇಸ್ರೋದಿಂದ ಈಗ ಸೃಷ್ಟಿಯಾಗಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


