ಕಾಶ್ಮೀರ: 370ನೇ ವಿಧಿ ರದ್ದತಿ ನಂತರ ಕೈಗಾರಿಕಾ ಕ್ಷೇತ್ರದಲ್ಲಿ 23,400 ಕೋಟಿ ರೂ. ನಷ್ಟ
ಸಂವಿಧಾನದ 370ನೇ ವಿಧಿ ರದ್ದತಿ ನಂತರ ಮುಷ್ಕರ, ನಿರ್ಬಂಧ ಮತ್ತು ಸಂವಹನಗಳ ಸ್ತಬ್ದತೆಯಿಂದಾಗಿ ಕಾಶ್ಮೀರದಲ್ಲಿನ ಕೈಗಾರಿಕಾ ಕ್ಷೇತ್ರದಲ್ಲಿ 39 ದಿನಗಳಲ್ಲಿ 23 ಸಾವಿರದ 400 ಕೋಟಿಯಷ್ಟು ನಷ್ಟ ಸಂಭವಿಸಿದೆ.

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದತಿ ನಂತರ ಮುಷ್ಕರ, ನಿರ್ಬಂಧ ಮತ್ತು ಸಂವಹನಗಳ ಸ್ತಬ್ದತೆಯಿಂದಾಗಿ ಕಾಶ್ಮೀರದಲ್ಲಿನ ಕೈಗಾರಿಕಾ ಕ್ಷೇತ್ರದಲ್ಲಿ 39 ದಿನಗಳಲ್ಲಿ 23 ಸಾವಿರದ 400 ಕೋಟಿಯಷ್ಟು ನಷ್ಟ ಸಂಭವಿಸಿದೆ.
ಕೈಗಾರಿಕಾ ಇಲಾಖೆ ಅಧಿಕೃತ ಮಾಹಿತಿ ಪ್ರಕಾರ ಕಾಶ್ಮೀರದಲ್ಲಿ 14 ಇಂಡಸ್ಟ್ರೀಯಲ್ ಎಸ್ಟೇಟ್ಸ್ ಹಾಗೂ 21 ಸಾವಿರ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದೆ. ಸಿಮೆಂಟ್ ಫ್ಲಾಂಟ್ಸ್, ಆಹಾರ ಸಂಸ್ಕರಣಾ ಘಟಕಗಳು, ಮರ ಸಂಬಂಧಿತ ಘಟಕಗಳು, ಹಾಲು, ಖನಿಜಯುಕ್ತ ನೀರು ಮತ್ತಿತರ ಉತ್ಪಾದನಾ ಘಟಕಗಳಿವೆ. ಸುಮಾರು 7 ಲಕ್ಷ ಕೆಲಸಗಾರರಿದ್ದಾರೆ. ಒಂದು ಲಕ್ಷ ಖಾಯಂ ಹಾಗೂ ಆರು ಲಕ್ಷ ಗುತ್ತಿಗೆ ನೌಕರರು ಕೆಲಸ ನಿರ್ವಹಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಆಗಸ್ಟ್ 5 ರಿಂದ ಎಲ್ಲಾ ರೀತಿಯ ಉತ್ಪಾದನಾ ಘಟಕಗಳು ಕಣಿವೆ ರಾಜ್ಯದಲ್ಲಿ ಸ್ಥಗಿತಗೊಂಡಿವೆ. ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಇದರಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಪ್ರತಿದಿನ 600 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. 39 ದಿನಗಳಲ್ಲಿ ಒಟ್ಟಾರೇ 23, 400 ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


