370ನೇ ವಿಧಿ

ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ಸಂವಿಧಾನದ ಪ್ರಯೋಜನಗಳ ಖಾತ್ರಿ: ಪ್ರಧಾನಿ ಮೋದಿ
ಜಮ್ಮು ಮತ್ತು ಕಾಶ್ಮೀರಕ್ಕೆ ಗುರುವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರ "ದೆಹಲಿ ಮತ್ತು ಜಮ್ಮು ಮತ್ತು ಕಾಶ್ಮೀರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿದ್ದು, ಪ್ರೀತಿಯ ಸಂಪರ್ಕವನ್ನು ಖಾತ್ರಿಪಡಿಸುತ್ತದೆ ಎಂದಿದ್ದಾರೆ.

ಕಾಶ್ಮೀರ 'ಉಳಿಸಿಕೊಳ್ಳಲು' ಬಯಸಿದರೆ 370 ವಿಧಿಯನ್ನು ಮರುಸ್ಥಾಪಿಸಿ, ಸಮಸ್ಯೆ ಬಗೆಹರಿಸಿ: ಕೇಂದ್ರಕ್ಕೆ ಮೆಹಬೂಬಾ ಮುಫ್ತಿ
ನೀವು "ಕಾಶ್ಮೀರವನ್ನು ಉಳಿಸಿಕೊಳ್ಳಲು" ಬಯಸಿದರೆ 370ನೇ ವಿಧಿಯನ್ನು ಪುನಃಸ್ಥಾಪಿಸಬೇಕು ಮತ್ತು ಕಣಿವೆಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು...

ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಗೆ 2 ವರ್ಷ: ತ್ರಿವರ್ಣ ಧ್ವಜ ಹಾರಿಸಿ ಬಿಜೆಪಿ ಸಂಭ್ರಮ, ಪಿಡಿಪಿಯಿಂದ 'ಶೋಕಾಚರಣೆ ದಿನ'
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿ ಗುರುವಾರಕ್ಕೆ ಎರಡು ವರ್ಷವಾಗಿದ್ದು, ಬಿಜೆಪಿ ಕಣಿವೆಯಲ್ಲಿ ತಿರಂಗಾ ರ್ಯಾಲಿಗಳನ್ನು ನಡೆಸುವ ಮೂಲಕ ಎರಡನೇ ವಾರ್ಷಿಕೋತ್ಸವವನ್ನು

ಜಮ್ಮು ಕಾಶ್ಮೀರದಲ್ಲಿ ಸುಧಾರಣೆ ಪ್ರಕ್ರಿಯೆ ಮುಗಿದು ಶೀಘ್ರದಲ್ಲೆ ಚುನಾವಣೆ ನಡೆಯಲಿದೆ: ಸರ್ವಪಕ್ಷ ಸಭೆ ನಂತರ ಪ್ರಧಾನಿ ಮಾತು
ಜಮ್ಮು ಮತ್ತು ಕಾಶ್ಮೀರದಲ್ಲಿಸುಧಾರಣೆ ಪ್ರಕ್ರಿಯೆ ಶೀಘ್ರವಾಗಿ ನಡೆದು ಚುನಾಯಿತ ಸರ್ಕಾರವನ್ನು ಸ್ಥಾಪಿಸಲು ಮತದಾನವನ್ನು ನಡೆಸಬಹುದುಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಇದು ಅದರ ಅಭಿವೃದ್ಧಿ ಪಥಕ್ಕೆ ಶಕ್ತಿ ತುಂಬಲಿದೆ ಎಂದು ಅವರು ಹೇಳಿದ್ದಾರೆ.

ವಿಶ್ವಾಸ ಪುನರ್ ಸ್ಥಾಪನೆಗೆ ಜಮ್ಮುಕಾಶ್ಮೀರದ ರಾಜ್ಯತ್ವವನ್ನು ಪುನಃಸ್ಥಾಪಿಸಬೇಕು: ಪ್ರಧಾನಿಗೆ ಫಾರೂಕ್ ಅಬ್ದುಲ್ಲಾ ಒತ್ತಾಯ
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಗುರುವಾರ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಪುನಃಸ್ಥಾಪಿಸುವ ಮೂಲಕ ಕಾಶ್ಮೀರದ ಮೇಲೆ ಜನರಿಗೆ ವಿಶ್ವಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಜಗತ್ತಿನ ಯಾವುದೇ ಶಕ್ತಿ 370ನೇ ವಿಧಿಯನ್ನು ಹಿಂದಕ್ಕೆ ತರಲಾರದು: ಬಿಜೆಪಿ
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ಪರಿಚ್ಛೇದದ ರದ್ದತಿ ಪ್ರಕ್ರಿಯೆಯಲ್ಲಿ ಸುಪ್ರೀಂಕೋರ್ಟ್ ನಿಯಮದ ಉಲ್ಲಂಘನೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಶಾನವಾಜ್ ಹುಸೇನ್, ಭೂಮಿಯ ಮೇಲಿನ ಯಾವುದೇ ಶಕ್ತಿ ಅದನ್ನು ಹಿಂದಕ್ಕೆ ತರಲು ಸಾಧ್ಯವಿಲ್ಲ ಎಂದಿದ್ದಾರೆ.

'ಗುಪ್ಕರ್ ಗ್ಯಾಂಗ್' ಜಾಗತಿಕ ಮಟ್ಟಕ್ಕೆ ವಿಸ್ತರಿಸಿದೆ, ಆದರೆ ಜಮ್ಮು ಕಾಶ್ಮೀರ ಎಂದಿಗೂ ಭಾರತದ ಭಾಗವಾಗಿ ಉಳಿಯಲಿದೆ: ಅಮಿತ್ ಶಾ
ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿಯೇ ಉಳಿಯಲಿದೆ. ಕೇಂದ್ರಾಡಳಿತ ಪ್ರದೇಶದ ರಾಜಕೀಯ ಪಕ್ಷಗಳ ಮೈತ್ರಿಯು ಒಂದು 'ಗುಪ್ಕರ್ ಗ್ಯಾಂಗ್' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಚೀನಾದ ಸಹಾಯದಿಂದ ಜಮ್ಮುಕಾಶ್ಮೀರದಲ್ಲಿ 370ನೇ ವಿಧಿ ಮತ್ತೆ ಜಾರಿಯಾಗಲಿದೆ: ಫಾರೂಕ್ ಅಬ್ದುಲ್ಲಾ
ಎಲ್‌ಎಸಿಯಲ್ಲಿನ ಉದ್ವಿಗ್ನತೆಯ ಸ್ಥಿತಿ ಏನೇ ಇದ್ದರೂ ಜಮ್ಮುಕಾಶ್ಮೀರದಲ್ಲಿನ 370 ನೇ ವಿಧಿಯನ್ನು ರದ್ದುಗೊಳಿಸುವ ನಿರ್ಧಾರವನ್ನು ಚೀನಾ ಎಂದಿಗೂ ಬೆಂಬಲಿಸಿರಲಿಲ್ಲ. ಹಾಗಾಗಿ ಈ ವಿಧಿಯನ್ನು(370ನೇ ವಿಧಿ) ಚೀನಾದ ಸಹಾಯದಿಂದ ಪುನಃಸ್ಥಾಪಿಸಬಹುದು ಎಂದು ನಾನು ಭಾವಿಸಿದ್ದೇನೆ ಎಂದೆನ್ನುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ತೆಗೆದ 370ನೇ ವಿಧಿ ರದ್ದತಿ ಈಗ ಎನ್‌ಸಿಇಆರ್‌ಟಿ ಪಠ್ಯ
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಗಳನ್ನು ಕೇಂದ್ರಾಡಳಿತ ಪ್ರದೇಶವಾಗಿಸಿ ಇದುವರೆಗೆ ಆ ರಾಜ್ಯಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದ ಕೇಂದ್ರ ಸರ್ಕಾರದ ಉಪಕ್ರಮ ಇದೀಗ ಎನ್‌ಸಿಇಆರ್‌ಟಿ ಪಠ್ಯಕ್ರಮಕ್ಕೆ ಸೇರಿದೆ.

