ದೇಶ

ಉತ್ತರ ಪ್ರದೇಶ: ಶಾಲೆಯಲ್ಲಿ ಮಕ್ಕಳು ನೆಲ ಒರೆಸುವ ಫೋಟೋ ತೆಗೆದ ಪತ್ರಕರ್ತನ ಬಂಧನ

ಶಾಲೆಯಲ್ಲಿ ಕೆಲವು ಮಕ್ಕಳು ನೆಲ ಒರೆಸುತ್ತಿದ್ದ ಫೋಟೋ ತೆಗೆದ ಪತ್ರಕರ್ತನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಅಜಂಗಢ ಜಿಲ್ಲಾಧಿಕಾರಿ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಉತ್ತರ ಪ್ರದೇಶ: ಶಾಲೆಯಲ್ಲಿ ಮಕ್ಕಳು ನೆಲ ಒರೆಸುವ ಫೋಟೋ ತೆಗೆದ ಪತ್ರಕರ್ತನ ಬಂಧನ
ಸಾಂದರ್ಭಿಕ ಚಿತ್ರ
Published On :

ಅಜಂಗಢ: ಶಾಲೆಯಲ್ಲಿ ಕೆಲವು ಮಕ್ಕಳು ನೆಲ ಒರೆಸುತ್ತಿದ್ದ ಫೋಟೋ ತೆಗೆದ ಪತ್ರಕರ್ತನನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದು, ಅಜಂಗಢ ಜಿಲ್ಲಾಧಿಕಾರಿ ಈ ಕುರಿತು ತನಿಖೆಗೆ ಆದೇಶಿಸಿದ್ದಾರೆ.

ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪತ್ರಕರ್ತ ಸಂತೋಷ್ ಜೈಸ್ವಾಲ್ ಅವರನ್ನು ಬಂಧಿಸಲಾಗಿದೆ.

ಸಂತೋಷ್ ಜೈಸ್ವಾಲ್ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಅಜಂಗಢ ಸ್ಥಳೀಯ ಪತ್ರಕರ್ತರು ಆರೋಪಿಸಿದ್ದಾರೆ. ಅಲ್ಲದೆ ಈ ಸಂಬಂಧ ತಾವು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿದ್ದು, ಅವರು ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಮಿರ್ಜಾಪುರದಲ್ಲಿ ಶಾಲಾ ಮಕ್ಕಳಿಗೆ ಬರೀ ರೊಟ್ಟಿ ಮತ್ತು ಉಪ್ಪು ನೀಡುತ್ತಿದ್ದನ್ನು ವಿಡಿಯೋ ಮಾಡಿದ ಪತ್ರಕರ್ತನನ್ನು ಬಂಧಿಸಲಾಗಿತ್ತು. 

ಸೆಪ್ಟೆಂಬರ್ 7ರಂದು ಬಿಜ್ನೋರ್ ನಲ್ಲಿ ಹ್ಯಾಂಡ್ ಪಂಪ್ ನಿಂದ ನೀರು ತೆಗೆದುಕೊಳ್ಳಲು ದಲಿತ ಕುಟುಂಬಕ್ಕೆ ನಿರ್ಬಂಧ ವಿಧಿಸಿದ್ದನ್ನು ವರದಿ ಮಾಡಿದಕ್ಕಾಗಿ ಐವರು ಪತ್ರಕರ್ತರ ವಿರುದ್ಧ ಕೇಸ್ ದಾಖಲಿಸಲಾಗಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.