ದೇಶ

ಭೀಕರ ದೃಶ್ಯ: ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದ 1 ವರ್ಷದ ಹೆಣ್ಣು ಮಗು, ವಿಡಿಯೋ ವೈರಲ್!

ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ 1 ವರ್ಷದ ಹೆಣ್ಣು ಮಗು ಕೆಳಗೆ ಬಿದ್ದಿದೆ. ಆದರೆ ಪೋಷಕರಿಗೆ ಇದರ ಪರಿವೇ ಇಲ್ಲದೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇನ್ನು ಕೆಳಗೆ ಬಿದ್ದ ಮಗು ಅಳುತ್ತಾ ರಸ್ತೆ ಮಧ್ಯೆ ಅಂಬೆಗಾಲಿಡುತ್ತಾ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೀಕರ ದೃಶ್ಯ: ಚಲಿಸುತ್ತಿದ್ದ ಕಾರಿನಿಂದ ಕೆಳಗೆ ಬಿದ್ದ 1 ವರ್ಷದ ಹೆಣ್ಣು ಮಗು, ವಿಡಿಯೋ ವೈರಲ್!
ಸಿಸಿಟಿವಿ ದೃಶ್ಯ
Published On :

ಮುನಾರ್(ಕೇರಳ): ವೇಗವಾಗಿ ಚಲಿಸುತ್ತಿದ್ದ ಕಾರಿನಿಂದ 1 ವರ್ಷದ ಹೆಣ್ಣು ಮಗು ಕೆಳಗೆ ಬಿದ್ದಿದೆ. ಆದರೆ ಪೋಷಕರಿಗೆ ಇದರ ಪರಿವೇ ಇಲ್ಲದೆ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಇನ್ನು ಕೆಳಗೆ ಬಿದ್ದ ಮಗು ಅಳುತ್ತಾ ರಸ್ತೆ ಮಧ್ಯೆ ಅಂಬೆಗಾಲಿಡುತ್ತಾ ಓಡಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕೇರಳದ ಇಡುಕಿ ಜಿಲ್ಲೆಯ ಮುನಾರ್ ನಲ್ಲಿ ಈ ಘಟನೆ ನಡೆದಿದೆ. ಕಾರೋಂದು ವೇಗವಾಗಿ ಚಲಿಸಿದ್ದು ಕಾರಿನಿಂದ ಮಗುವೊಂದು ಕೆಳಗೆ ಬಿದ್ದಿದೆ. ನಂತರ ಮಗು ಅಳುತ್ತಾ ಅಂಬೆಗಾಲಿಡುತ್ತಾ ರಸ್ತೆ ಮಧ್ಯೆ ಓಡಾಡುತ್ತಿದೆ. ಇದನ್ನು ನೋಡಿದ ಸ್ಥಳೀಯರು ಮಗುವನ್ನು ರಕ್ಷಿಸಿ ಪೋಷಕರಿಗೆ ಹಸ್ತಾಂತರಿಸಿದ್ದಾರೆ. 

ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಮಗು ಕೆಳಗೆ ಬಿದ್ದ ನಂತರ ಯಾವುದೇ ವಾಹನಗಳು ಹಿಂದೆ ಬರದಿದ್ದರಿಂದ ಮಗು ಸುರಕ್ಷಿತವಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು ಪೋಷಕರ ವಿರುದ್ಧ ನೆಟಿಗರು ಕಿಡಿಕಾರುತ್ತಿದ್ದಾರೆ. ಮಗು ಕಾರಿನಿಂದ ಕೆಳಗೆ ಬಿದ್ದಿದ್ದರು. ಪೋಷಕರಿಗೆ ಇದು ಗಮನಕ್ಕೆ ಬರಲಿಲ್ಲ ಎಂತ ಘೋರ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.