ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನ ನಿರಂತರ ಯತ್ನ: ಕೆ. ಶಿವನ್
ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್....

ಬೆಂಗಳೂರು: ಚಂದ್ರಯಾನ 2 ಲ್ಯಾಂಡರ್ ಜೊತೆ ಮತ್ತೆ ಸಂಪರ್ಕ ಸಾಧಿಸಲು ಮುಂದಿನ 14 ದಿನಗಳ ಕಾಲ ನಿರಂತರ ಪ್ರಯತ್ನ ಮಾಡುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧ್ಯಕ್ಷ ಕೆ.ಶಿವನ್ ಅವರು ಶನಿವಾರ ಹೇಳಿದ್ದಾರೆ.
ಚಂದ್ರಯಾನ 2 ಯೋಜನೆಯು ಶೇ.100 ರಷ್ಟು ಯಶಸ್ವಿಯಾಗಿದೆ. ಸಾಫ್ಟ್ ಲ್ಯಾಂಡಿಂಗ್ ವೇಳೆ ಲ್ಯಾಂಡರ್ ಜೊತೆ ಸಂಪರ್ಕ ಕಡಿತಗೊಂಡಿದೆ. ಮುಂದಿನ 14 ದಿನಗಳಲ್ಲಿ ಲ್ಯಾಂಡರ್ ಮರು ಸಂಪರ್ಕ ಸಾಧಿಸಲು ಯತ್ನಿಸುವುದಾಗಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಶಿವನ್ ತಿಳಿಸಿದ್ದಾರೆ.
ಮೊದಲ ಹಂತದ ಕಾರ್ಯಾಚರಣೆ ಎಲ್ಲವೂ ನಿರೀಕ್ಷೆಯಂತೆ ನಡೆಯಿತು. ಆದರೆ, ಕೊನೆಯ ಹಂತದ ಕಾರ್ಯಾಚರಣೆ ವೇಳೆ ನಾವು ಸಂವಹನ ಕಳೆದುಕೊಂಡೆವು ಎಂದು ಅವರು ವಿವರಿಸಿದರು.
ಇಸ್ರೋದ ಬಾಹ್ಯಾಕಾಶ ವಿಜ್ಞಾನದ ಸಾಮರ್ಥ್ಯವನ್ನು ಆರ್ಬಿಟರ್ ಮೂಲಕ ಸಾಬೀತು ಮಾಡಲಾಗಿದೆ. ಆರ್ಬಿಟರ್ ಪೂರ್ಣ ಸಾಮರ್ಥ್ಯದಲ್ಲಿ ಕೆಲಸ ಮಾಡುತ್ತಿದೆ. ಆದರೆ, ತಂತ್ರಜ್ಞಾನದ ಪ್ರದರ್ಶನವಾಗಿದ್ದ ವಿಕ್ರಮ್ ಲ್ಯಾಂಡರ್‌ನಲ್ಲಿ ಹಿನ್ನೆಡೆಯಾಗಿದೆ ಎಂದು ಶಿವನ್ ಹೇಳಿದ್ದಾರೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಮಾತಿನ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಅವರು, “ ಪ್ರಧಾನಿ ನಮಗೆ ಸ್ಫೂರ್ತಿ ಮತ್ತು ಬೆಂಬಲದ ಮೂಲ. ಅವರ ಮಾತು ನಮಗೆ ಪ್ರೇರಣೆ ನೀಡಿತು. ಅವರ ಭಾಷಣದಲ್ಲಿ, ನಾನು ಗಮನಿಸಿದ ವಿಶೇಷ ನುಡಿಗಟ್ಟು, ‘ವಿಜ್ಞಾನವನ್ನು ಫಲಿತಾಂಶಗಳಿಗಾಗಿ ನೋಡಬಾರದು. ಬದಲಿಗೆ ಪ್ರಯೋಗಗಳನ್ನು ಮಾಡಬೇಕು ಮತ್ತು ಪ್ರಯೋಗಗಳು ಫಲಿತಾಂಶಗಳಿಗೆ ಕಾರಣವಾಗುತ್ತವೆ" ಎಂಬ ಮಾತನ್ನು ಉಲ್ಲೇಖಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


