ದೇಶ

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ನಿಧನ

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್ ನಿಧನ
ಕಿರಣ್ ನಗರ್ಕರ್
Published On :

ಮುಂಬೈ:  ಖ್ಯಾತ ಕಾದಂಬರಿಕಾರ, ಲೇಖಕ ಕಿರಣ್ ನಗರ್ಕರ್  ಗುರುವಾರ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದ ಬಳಲುತ್ತಿದ್ದ ನಗರ್ಕರ್ ಅವರನ್ನು ಬಾಂಬೈ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ  ಅವರು ಕೊನೆಯುಸಿರೆಳೆದಿದ್ದಾರೆ.

ರಾವಣ್ ಮತ್ತು ಎಡ್ಡಿ, ಕೋಕೋಲ್ಡ್ ಮತ್ತಿತರ ಕಾದಂಬರಿಗಳನ್ನು ನಗರ್ಕರ್ ರಚಿಸಿದ್ದರು. ಗಾಡ್ಸ್  ಲಿಟ್ಲ್ ಸೊಲ್ಡರ್ , ದಿ ಎಕ್ಸಾಟ್ರಾ ಮತ್ತು ರೆಸ್ಟ್ ಇನ್ ಪೀಸ್  ಕೃತಿಗಳನ್ನು ರಚಿಸಿದ್ದರು. 1974ರಲ್ಲಿ ಅವರ ಮೊದಲ ಮರಾಠಿ ಕಾದಂಬರಿ ಪ್ರಕಟಗೊಂಡಿತ್ತು. 

ಮರಾಠಿ ಅಲ್ಲದೇ ಇಂಗ್ಲೀಷ್ ನಲ್ಲಿ ಏಳು ಕಾದಂಬರಿಗಳನ್ನು ರಚಿಸಿದ್ದ ನಗರ್ಕರ್ ಅವರ ಅವರ ಆರ್ಸನಿಸ್ಟ್ ಕಾದಂಬರಿ 2019ರಲ್ಲಿ ಪ್ರಕಟಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.