ದೇಶ

ನಕಲಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ: ಅಜಿತ್ ಜೋಗಿ ಪುತ್ರ ಅಮಿತ್ ಜೋಗಿ ಬಂಧನ

ನಕಲಿ ಪ್ರಮಾಣ ಪತ್ರ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಪುತ್ರ ಅಮಿತ್ ಜೋಗಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ನಕಲಿ ಪ್ರಮಾಣ ಪತ್ರ ಸಲ್ಲಿಕೆ ಪ್ರಕರಣ: ಅಜಿತ್ ಜೋಗಿ ಪುತ್ರ ಅಮಿತ್ ಜೋಗಿ ಬಂಧನ
ಅಮಿತ್ ಜೋಗಿ
Published On :

ನವದೆಹಲಿ:  ನಕಲಿ  ಪ್ರಮಾಣ ಪತ್ರ ಪ್ರಕರಣದಲ್ಲಿ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ  ಪುತ್ರ ಅಮಿತ್ ಜೋಗಿಯನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಅಮಿತ್ ಜೋಗಿ(42) ಅವರನ್ನು ಬಿಲಾಸ್‌ಪುರದಲ್ಲಿರುವ ನಿವಾಸದಲ್ಲೇ ಪೊಲೀಸರು ಬಂಧಿಸಲಾಗಿದೆ.

ಬಿಜೆಪಿ ಮುಖಂಡರಾದ ಸಮೀರಾ ಪೈಕ್ರಾ ಅವರು ನೀಡಿದ್ದ ದೂರಿನ ಮೇರೆಗೆ ಅಮಿತ್ ಜೋಗಿಯವರನ್ನು ಬಂಧಿಸಲಾಗಿದೆ. ಸಮೀರಾ ಅವರು ಛತ್ತೀಸ್‌ಗಢದ ಮರ್ವಾಹಿ ವಿಧಾನಸಭಾ ಕ್ಷೇತ್ರದಿಂದ 2013ರಲ್ಲಿ ಅಮಿತ್ ವಿರುದ್ಧ ಸ್ಪರ್ಧಿಸಿ ಸೋತಿದ್ದರು.

ಬಂಧಿತ ಅಮಿತ್ ಜೋಗಿ ಅವರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಮಿತ್ ಅವರು ತಮ್ಮ ಊರು, ಜನ್ಮ ವರ್ಷ ಹಾಗೂ ಅವರ ಜಾತಿಯ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದರು. ಜೋಗಿ ಅವರು 1978ರಲ್ಲಿ ಛತ್ತೀಸ್‌ಗಢದ ಸರ್ಬೆಹೆರಾ ಗೌರೇಲಾ ಪ್ರದೇಶದಲ್ಲಿ ಜನಿಸಿದ್ದಾಗಿ ಸುಳ್ಳು ಹೇಳಿದ್ದಾರೆ ಆದರೆ ಅವರು 1977ರಲ್ಲಿ ಟೆಕ್ಸಾಸ್‌ನಲ್ಲಿ ಹುಟ್ಟಿದ್ದಾರೆ ಎಂದು ಎಂದು ಸಮೀರಾ ದೂರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.