ದೇಶ

100 ದಿನಗಳ ಹೊಸ್ತಿಲಲ್ಲಿ ಮೋದಿ-2 ಸರ್ಕಾರ; ಸಾಧನೆಗಳನ್ನು ಜನರ ಮುಂದೆ ತೋರಿಸಲು ಸಚಿವಾಲಯ ಸಜ್ಜು

ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370, ತ್ರಿವಳಿ ತಲಾಖ್ ಮಸೂದೆ ಅನುಮೋದನೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೆಲವು ಕ್ರಮಗಳು ಇದು ನರೇಂದ್ರ ಮೋದಿ-2 ಸರ್ಕಾರದ 100 ದಿನಗಳ ಕೆಲವು ಸಾಧನೆಗಳಾಗಿವೆ.

100 ದಿನಗಳ ಹೊಸ್ತಿಲಲ್ಲಿ ಮೋದಿ-2 ಸರ್ಕಾರ; ಸಾಧನೆಗಳನ್ನು ಜನರ ಮುಂದೆ ತೋರಿಸಲು ಸಚಿವಾಲಯ ಸಜ್ಜು
ನರೇಂದ್ರ ಮೋದಿ
Published On :

ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವಾದ ಸಂವಿಧಾನ ವಿಧಿ 370, ತ್ರಿವಳಿ ತಲಾಖ್ ಮಸೂದೆ ಅನುಮೋದನೆ, ದೇಶದ ಆರ್ಥಿಕ ಪುನಶ್ಚೇತನಕ್ಕೆ ಕೆಲವು ಕ್ರಮಗಳು ಇದು ನರೇಂದ್ರ ಮೋದಿ-2 ಸರ್ಕಾರದ 100 ದಿನಗಳ ಕೆಲವು ಸಾಧನೆಗಳಾಗಿವೆ. 


ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ತನ್ನ ಸಾಧನೆಗಳನ್ನು ದೊಡ್ಡ ರೀತಿಯಲ್ಲಿ ಜನರ ಮುಂದೆ ತೋರಿಸಿಕೊಳ್ಳಲು ಮುಂದಾಗಿದೆ. ಕಳೆದ 100 ದಿನಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ ವಿವರ ನೀಡುವಂತೆ ಪ್ರಮುಖ ಸಚಿವಾಲಯಗಳಿಗೆ ಪ್ರಧಾನ ಮಂತ್ರಿ ಸಚಿವಾಲಯ ಸೂಚಿಸಿದೆ. ಈ ಎಲ್ಲಾ ಉಪಕ್ರಮಗಳು ಮತ್ತು ಸಾಧನೆಗಳ ಪಟ್ಟಿಗಳನ್ನು ಹೊತ್ತ ಹೊತ್ತಿಗೆಯನ್ನು ಸರ್ಕಾರ ಬಿಡುಗಡೆ ಮಾಡಲಿದೆ.

100 ದಿನಗಳನ್ನು ಕೇಂದ್ರ ಸರ್ಕಾರ ಪೂರೈಸುವ ದಿನ ಪ್ರಧಾನಿ ಮೋದಿಯವರು ಬೆಂಗಳೂರಿನ ಇಸ್ರೊ ಕೇಂದ್ರದಲ್ಲಿರುತ್ತಾರೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2 ಗಗನನೌಕೆ ಇಳಿಯುವುದನ್ನು ಅವರು ಕಣ್ತುಂಬಿಕೊಳ್ಳಲಿದ್ದಾರೆ. 

Story image


ಸರ್ಕಾರ ತನ್ನ ಸಾಧನೆಗಳನ್ನು ಜನರ ಮುಂದೆ ಪ್ರಸ್ತುತಪಡಿಸಿದರೆ ಮುಂಬರುವ ಜಾರ್ಖಂಡ್, ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯಗಳ ಚುನಾವಣೆಯಲ್ಲಿ ಅನುಕೂಲವಾಗಲಿದೆ ಎಂಬ ಲೆಕ್ಕಾಚಾರ ಅವರದ್ದು. 


ಹಿಂದಿನ ಮೋದಿ ಸರ್ಕಾರದಲ್ಲಿ ಸಚಿವಾಲಯಗಳ ಕೆಲಸಗಳ ವರದಿಯನ್ನು ಒಂದು ವರ್ಷವಾದ ನಂತರ ಜನತೆ ಮುಂದೆ ಪ್ರಸ್ತುತಪಡಿಸಲಾಯಿತು. ಆದರೆ ಈ ಬಾರಿ ಪ್ರತಿ 100 ದಿನಗಳಿಗೊಮ್ಮೆ ತೋರಿಸುವ ಯೋಜನೆಯನ್ನು ಸರ್ಕಾರ ಹಮ್ಮಿಕೊಂಡಿದೆ. ಸಚಿವಾಲಯಗಳಿಗೆ ಉತ್ತಮ ಆಡಳಿತ ವಿಭಾಗವನ್ನು ರಚಿಸುವಂತೆ ಕೂಡ ಸೂಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.