ದೇಶ

ಬಿಜೆಪಿ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ನಿಧನ

ಪಂಜಾಬ್ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು.

ಬಿಜೆಪಿ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ನಿಧನ
ಸಂಗ್ರಹ ಚಿತ್ರ
Published On :

ನವದೆಹಲಿ: ಪಂಜಾಬ್ ಭಾರತೀಯ ಜನತಾ ಪಕ್ಷದ ಮಾಜಿ ಅಧ್ಯಕ್ಷ ಕಮಲ್ ಶರ್ಮಾ ಹೃದಯಾಘಾತದಿಂದ ಭಾನುವಾರ ನಿಧನ ಹೊಂದಿದರು.

ಬೆಳಿಗ್ಗೆಯಷ್ಟೇ ತಮ್ಮ ವೈಯಕ್ತಿಯ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಿ ಜನರಿಗೆ ದೀಪಾವಳಿ ಶುಭಾಶಯ ಕೋರಿದ್ದರು. ಈ ಟ್ವೀಟ್ ಮಾಡಿದ ಒಂದೇ ಗಂಟೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಿಧನರಾಗುವ ಎರಡು ಗಂಟೆಗಳ ಮೊದಲು ಶರ್ಮಾ ಅವರು  ಟ್ವಿಟ್ಟರ್  ಮೂಲಕ  ನಾಡಿನ ಜನತೆಗೆ ದೀಪಾವಳಿ ಹಬ್ಬದ ಶುಭ ಹಾರೈಸಿದ್ದರು.

ಕಮಲ್ ಶರ್ಮಾ(48) ವಾಕಿಂಗ್ ಹೋಗಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಈ ಕೂಡಲೇ ಕುಟುಂಬದ ಸದಸ್ಯರು ಶರ್ಮಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಚಿಕಿತ್ಸೆ ಫಲಿಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. 

ಪಂಜಾಂಬ್​​​ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಕಮಲ್ 2015ರಲ್ಲಿ ತಮ್ಮೆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ಪಂಜಾಬ್​​ ರಾಜಕೀಯದಲ್ಲಿ ಬಹಳ ಸಕ್ರಿಯರಾಗಿದ್ದರು. ಕಮಲ್​​ ಶರ್ಮಾ ಹಿಂದಿನಿಂದಲೂ ಬಿಜೆಪಿ ಹೈಕಮಾಂಡ್​ ಮತ್ತು ಪ್ರಧಾನಿ ಮೋದಿಯವರಿಗೆ ಆಪ್ತರಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿರೋಮಣಿ ಅಕಾಲಿ ದಳ ಪಕ್ಷ ಎಂಬ ಪಕ್ಷವೂ ಮೈತ್ರಿಯಾಗಿ ಚುನಾವಣೆಗೆ ಹೋಗಿದ್ದವು. ಉಭಯ ಪಕ್ಷಗಳು ಒಟ್ಟಿಗೆ ಚುನಾವಣೆಗೆ ಎದುರಿಸಲು ಕಮಲ್​​ ಶರ್ಮಾ ಅವರೇ ಕಾರಣರಾಗಿದ್ದರು. ಸೀಟು ಹಂಚಿಕೆ ವೇಳೆ ಅಕಾಲಿ ದಳ 10 ಸ್ಥಾನಗಳಲ್ಲಿ ಹಾಗೂ ಬಿಜೆಪಿ 3 ಸ್ಥಾನಗಳಲ್ಲಿ ಸ್ಪರ್ಧೆ ಮಾಡಬಹುದು ಎಂದು ಸಲಹೆ ನೀಡಿದ್ದರು. ಇಲ್ಲಿ ಬಿಜೆಪಿ ಮೂರರ ಪೈಕಿ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.