ಉತ್ತರ ಪ್ರದೇಶ: ಪ್ರೇಯಸಿಯೊಡನೆ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಲೆ, ಟಿವಿ ನಿರೂಪಕನ ಬಂಧನ
ಪತ್ನಿಯನ್ನು ಕೊಂದ ಆರೋಪದಡಿ ಟಿವಿ ನಿರೂಪಕನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿಯನ್ನು ಕೊಂದ ಆರೋಪದಡಿ ಟಿವಿ ನಿರೂಪಕನೊಬ್ಬನನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ನಡೆದಿದೆ.
ನಿರೂಪಕ ಅಜಿತೇಶ್ ಮಿಶ್ರಾ ಅವರ ಪತ್ನಿ ದಿವ್ಯಾ ಸಾವನ್ನಪ್ಪಿದ ಮಹಿಳೆಯಾಗಿದ್ದು ಸೋಮವಾರ ಇಟವಾದ ಕತ್ರಾ ಬಾಲ್ ಸಿಂಗ್ ಪ್ರದೇಶದಲ್ಲಿರುವ ಆವರ ನಿವಾಸದಲ್ಲಿ ಶವ ಪತ್ತೆಯಾಗಿದೆ. ಪ್ರಕರಣದಲ್ಲಿ ಅಜಿತೇಶ್ ಅವರಲ್ಲದೆ ಆತನ ಪ್ರೇಮಿ ದೆಹಲಿಯ ಭಾವನಾ ಆರ್ಯ ಮತ್ತು ಫರಿದಾಬಾದ್ ಮೂಲದ ಸ್ನೇಹಿತ ಅಖಿಲ್ ಕುಮಾರ್ ಸಿಂಗ್ ಸಹ ಬಂಧಿಸಲ್ಪಟ್ಟಿದ್ದಾರೆ. ಈ ಮೂವರೂ ದೆಹಲಿ ಮೂಲದ ಟಿವಿ ಚಾನಲ್ ವೊಂದರಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು.
ಅಜಿತೇಶ್ ಹಾಗೂ ಗೆಳತಿ ಭಾವನಾ ನಡುವೆ ಅನಿತಿಕ ಸಂಬಂಧವಿದ್ದು ಇದು ಅವನ ಪತ್ನಿ ದಿವ್ಯಾಗೆ ತಿಳಿದ ನಂತರ ಪತಿ ಪತ್ನಿಯರಲ್ಲಿ ಆಗಾಗ ಜಗಳವಾಗುತ್ತಿತ್ತು. ಅದೊಮ್ಮೆ ದಿವ್ಯಾ ಭಾವನಾ ಜತೆ ಫೋನ್ ಮೂಲಕ ಸಂಪರ್ಕಿಸಿ ಹೀಯಾಳಿಸಿದ ಬಳಿಕ ಗಂಡ ಹೆಂಡತಿ ನಡುವಿನ ಸಂಬಂಧ ಬಿರುಕು ಬಿಟ್ಟಿದೆ. ಇದರಿಂದ ಕ್ರುದ್ದಗೊಂಡ ಅಜಿತೇಶ್ ತನ್ನ ಸ್ನೇಹಿತನೊಡನೆ ಸೇರಿ ಪತ್ನಿಯನ್ನು ಕೊಲ್ಲಲು ಸಂಚು ರೂಪಿಸಿದ್ದನೆ. ಅದರಂತೆ ಅಖಿಲ್ ಅಕ್ಟೋಬರ್ 14 ರಂದು ಅಜಿತೇಶ್ ಅವರ ನಿವಾಸವನ್ನು ತಲುಪಿದರು ಎಂದು ಎಸ್‌ಎಸ್‌ಪಿ ಸಂತೋಷ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ದಿವ್ಯಾ ರಕ್ತಸ್ರಾವವಾಗಿ ನರಳಿ ಸಾಯುವವರೆಗೂ ಅಖಿಲ್ ಆಕೆಯ ಮ್ಲೆ ಹೂವಿನ ಕುಂಡದಿಂದ ಹಲ್ಲೆ ಮಾಡಿದ್ದಾನೆ. ಬಳಿಕ ತಾನು ಆ ಸ್ಥಳದಿಂದ ಪರಾರಿಯಾಗಿದ್ದಾನೆ.
ದಿವ್ಯಾ ಮಾವ ಮೋದ್ ಮಿಶ್ರಾ ಅವರು ನೀಡಿದ ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಅದೇ ದಿನ ಪ್ರಕರಣ ದಾಖಲಾಗಿದ್ದು, ವಿಧಿವಿಜ್ಞಾನ ತಜ್ಞರು ಮತ್ತು ಶ್ವಾನ ದಳದ ಸಹಾಯದಿಂದ ತನಿಖೆ ನಡೆಸಿದಾಗ ನೈಜ ಆರೋಪಿಗಳು ಪತ್ತೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


