ಮುಂದಿನ 3 ವರ್ಷಗಳಲ್ಲಿ ಕಡ್ಡಾಯವಾಗಿ ನೀರಿನ ಸದ್ಭಳಕೆ ತೋರಿಸಿ: ಶಾಲೆಗಳಿಗೆ ಸಿಬಿಎಸ್ ಇ ಆದೇಶ
ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ನೀರನ್ನು ಸರಿಯಾಗಿ ಬಳಕೆ ಮಾಡುವಂತೆ ಆದೇಶ ಹೊರಡಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ನೀರಿನ ನಿರ್ವಹಣೆ ಮತ್ತು ನಿಗದಿತವಾಗಿ ನೀರಿನ ಲೆಕ್ಕಪರಿಶೋಧನೆ ನಡೆಸುವಂತೆ ಹೇಳಿದೆ.

ನವದೆಹಲಿ: ಮಳೆಗಾಲ ಮುಗಿದು ಚಳಿಗಾಲ ಕಾಲಿಡುತ್ತಿದೆ. ವಾತಾವರಣ ಬಿಸಿಯಾಗುತ್ತಿದೆ. ದೇಶಾದ್ಯಂತ ಅಲ್ಲಲ್ಲಿ ನೀರಿನ ಬರ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ ಇ) ನೀರನ್ನು ಸರಿಯಾಗಿ ಬಳಕೆ ಮಾಡುವಂತೆ ತನ್ನ ಅಧೀನದಲ್ಲಿ ಬರುವ ಶಾಲೆಗಳಿಗೆ ಆದೇಶ ಹೊರಡಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ನೀರಿನ ನಿರ್ವಹಣೆ ಮತ್ತು ನಿಗದಿತವಾಗಿ ನೀರಿನ ಲೆಕ್ಕಪರಿಶೋಧನೆ ನಡೆಸುವಂತೆ ಹೇಳಿದೆ.
ನೀತಿ ಆಯೋಗದ ಇತ್ತೀಚಿನ ವರದಿಯಲ್ಲಿ, ಬೆಂಗಳೂರು, ದೆಹಲಿ, ಚೆನ್ನೈ, ಹೈದರಾಬಾದ್ ಸೇರಿದಂತೆ 21 ನಗರಗಳಲ್ಲಿ ಮುಂದಿನ ವರ್ಷದ ಹೊತ್ತಿಗೆ ಅಂತರ್ಜಲ ಕುಸಿಯಲಿದ್ದು, ಇದರಿಂದ ಸುಮಾರು 100 ದಶಲಕ್ಷ ಮಂದಿಗೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.
ಈ ನಿಟ್ಟಿನಲ್ಲಿ ಸಿಬಿಎಸ್ ಇ ನೀರಿನ ಸಂರಕ್ಷಣೆ ಮಾರ್ಗಸೂಚಿ ರಚಿಸಿದ್ದು, ತನ್ನ ಅಧೀನದಲ್ಲಿ ಬರುವ ಶಾಲೆಗಳಲ್ಲಿ ನೀರಿನ ಸಂರಕ್ಷಣೆಗೆ ಅತ್ಯಾಧುನಿಕ ಸುರಕ್ಷಿತ ಸಾಧನಗಳನ್ನು ಅಳವಡಿಸಿಕೊಳ್ಳಬೇಕು. ಸೆನ್ಸಾರ್ ಗಳನ್ನು ಹೊಂದಿರುವ ಸ್ವಯಂಚಾಲಿತ ಟ್ಯಾಪ್ ಗಳು, ಆದ್ಯತೆ ಮೇರೆಗೆ ಡಬಲ್ ಫ್ಲಶ್ ಟ್ಯಾಂಕುಗಳು, ನೀರಿನ ಸೋರಿಕೆಯಾಗುತ್ತಿದೆಯೇ ಎಂದು ನಿಗದಿತವಾಗಿ ತಪಾಸಣೆ ಮಾಡುವುದು ಇತ್ಯಾದಿಗಳನ್ನು ಮುಂದಿನ ಮೂರು ವರ್ಷದೊಳಗೆ ಅಳವಡಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


