ಆರ್ ಎಸ್ ಎಸ್ ಕಾರ್ಯಕರ್ತ ಸೇರಿ ಕುಟುಂಬಸ್ಥರ ಹತ್ಯೆ ಪ್ರಕರಣ: ಪ್ರಧಾನ ಆರೋಪಿ ಬಂಧನ
ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಆತನ ಗರ್ಭಿಣಿ ಪತ್ನಿ ಮತ್ತು 5 ವರ್ಷದ ಮಗನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನ ಆರೋಪಿಯನ್ನು ಬಂಧಿಸಿದ್ದಾರೆ.

ಕೊಲ್ಕೊತಾ: ಆರ್ ಎಸ್ ಎಸ್ ಕಾರ್ಯಕರ್ತ ಹಾಗೂ ಆತನ ಗರ್ಭಿಣಿ ಪತ್ನಿ ಮತ್ತು 5 ವರ್ಷದ ಮಗನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಧಾನ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳವಾರ ಪೊಲೀಸರು ಮೃತ ವ್ಯಕ್ತಿಯ ಸ್ನೇಹಿತನನ್ನು ಬಂಧಿಸಿದ್ದಾರೆ. ಬಂಧು ಪ್ರಕಾಶ್ ಪಲ್ ಅವರ ಸ್ನೇಹಿತ ಉತ್ಪಾಲ್ ಬೆಹ್ರಾ ಎಂಬಾತ ಇನ್ಸ್ಯೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತನು ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ, ಬಂಧು ಪ್ರಕಾಶ್ ಆತನ ಬಳಿ ಇನ್ಸ್ಯೂರೆನ್ಸ್ ಮಾಡಿಸಿದ್ದರು, ಅದಕ್ಕಾಗಿ ಹಣ ನೀಡುತ್ತಿದ್ದರು.
ಆದರೆ ಉತ್ಪಾಲ್ ಬೆಹ್ರಾ ಪ್ರೀಮಿಯಂ ಕಟ್ಟದೆ ಹಣವನ್ನು ತಾನೆ ಬಳಸಿಕೊಂಡಿದ್ದ, ಪ್ರೀಮಿಯಂ ಕಟ್ಟಿದ ರಸೀದಿ ನೀಡುವಂತೆ ಕೇಳಿದ್ದಾನೆ, ಈ ವೇಳೆ ಆತ ಅನುಚಿತವಾಗಿ ವರ್ತಿಸಿದ್ದಾನೆ, ಪದೇ ಪದೇ ರಸೀದಿ ನೀಡುವಂತೆ ಕೇಳಿದ ಹಿನ್ನೆಲೆಯಲ್ಲಿ ಆತನನ್ನು ಕೊಲೆ ಮಾಡಲು ನಿರ್ಧರಿಸಿದ.
ಅದರಂತೆ ಕಳೆದ ಬುಧವಾರ ಬಂಧು ಪ್ರಕಾಶ್ ನನ್ನು ಕೊಲೆ ಮಾಡಿದ್ದಾನೆ, ನಂತರ ಈ ವಿಷಯ ಆತನ ಪತ್ನಿ ಮತ್ತು ಮಗನಿಗೆ ತಿಳಿಯಿತು ಎಂಬ ಕಾರಣದಿಂದಾಗಿ ಅವರಿಬ್ಬರನ್ನು ಕೊಲೆ ಮಾಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


