ಭಾರತದಲ್ಲಿರುವ ಮುಸ್ಲಿಮರು ಅತ್ಯಂತ ಸಂತೋಷದಿಂದಿದ್ದಾರೆ, ಏಕೆಂದರೆ ನಾವು ಹಿಂದೂಗಳು: ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್
ವಿಶ್ವದಲ್ಲಿ ಅತ್ಯಂತ ಸಂತೋಷದಿಂದ ಇರುವ ಮುಸ್ಲಿಮರು ಕಾಣಸಿಗುವುದು ಭಾರತದಲ್ಲಿ ಇದಕ್ಕೆ ಕಾರಣ ಹಿಂದೂ ಸಂಸ್ಕೃತಿ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.

ಒಡಿಶಾ: ವಿಶ್ವದಲ್ಲಿ ಅತ್ಯಂತ ಸಂತೋಷದಿಂದ ಇರುವ ಮುಸ್ಲಿಮರು ಕಾಣಸಿಗುವುದು ಭಾರತದಲ್ಲಿ ಇದಕ್ಕೆ ಕಾರಣ ಹಿಂದೂ ಸಂಸ್ಕೃತಿ ಎಂದು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ.
9 ದಿನಗಳ ಕಾಲ ಒಡಿಶಾ ಪ್ರವಾಸದಲ್ಲಿರುವ ಮೋಹನ್ ಭಾಗ್ವತ್ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಒಡಿಶಾದಲ್ಲಿ ಆರ್ ಎಸ್ಎಸ್ ನ ವಾರ್ಷಿಕ ಸಭೆ ನಡೆಯುತ್ತಿದೆ.
ಹಿಂದೂ ಎನ್ನುವುದು ಧರ್ಮ ಅಥವಾ ಭಾಷೆಯಲ್ಲ. ಅದು ದೇಶದ ಹೆಸರೂ ಅಲ್ಲ. ಹಿಂದೂ ಎನ್ನುವುದು ಭಾರತದಲ್ಲಿ ಜೀವಿಸುತ್ತಿರುವ ಜನರ, ವಿವಿಧತೆಯನ್ನು ಗೌರವಿಸುವ ಒಪ್ಪಿಕೊಳ್ಳುವ ಸಂಸ್ಕೃತಿ ಎಂದು ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.
ಸರಿ ದಾರಿಯಿಂದ ಯಾವುದೇ ದೇಶ ಹೊರನಡೆದರೆ ಅದು ಸತ್ಯದ ಶೋಧನೆಗಾಗಿ ನಮ್ಮಲ್ಲಿ ಬರುತ್ತದೆ. ಜ್ಯೂಗಳು ಆಶ್ರಯಕ್ಕಾಗಿ ಎದುರು ನೋಡುತ್ತಿದ್ದಾಗ ಅವರಿಗೆ ಆಶ್ರಯ ನೀಡಿದ ಏಕೈಕ ರಾಷ್ಟ್ರ ಭಾರತವಾಗಿತ್ತು. ಭಾರತದಲ್ಲಿ ಅತ್ಯಂತ ಸಂತೋಷವಾಗಿರುವ ಮುಸ್ಲಿಮರು ಕಾಣಸಿಗುತ್ತಾರೆ. ಏಕೆಂದರೆ ನಾವು ಹಿಂದೂಗಳು, ಆರ್ ಎಸ್ಎಸ್ ಹಾಗೂ ಸಮಾಜ ಒಟ್ಟಿಗೆ ಕಾರ್ಯ ನಿರ್ವಹಿಸಬೇಕು, ಒಂದೇ ಸಂಘಟನೆಯಾಗಿ ಕಾರ್ಯನಿರ್ವಹಿಸಬೇಕೆಂಬುದು ತಮ್ಮ ಆಶಯವಾಗಿದೆ ಎಂದು ಭಾಗ್ವತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


