ದೇಶ

ಬೀಚ್ ಕ್ಲೀನಿಂಗ್ ವೇಳೆ ಕೈಯಲ್ಲಿದಿದ್ದೇನು?.. ಕೊನೆಗೂ ಉತ್ತರಿಸಿದ ಪ್ರಧಾನಿ ಮೋದಿ

ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

ಬೀಚ್ ಕ್ಲೀನಿಂಗ್ ವೇಳೆ ಕೈಯಲ್ಲಿದಿದ್ದೇನು?.. ಕೊನೆಗೂ ಉತ್ತರಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಪ್ಲಾಗಿಂಗ್
Published On :

ಚೆನ್ನೈ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಭೇಟಿ ವೇಳೆ ಮಮ್ಮಲಾಪುರಂ ಬೀಚ್ ನಲ್ಲಿ ವಾಕಿಂಗ್ ಮಾಡಿದ್ದ ಪ್ರಧಾನಿ ಮೋದಿ ಬೀಚ್ ಕ್ಲೀನಿಂಗ್ ನಲ್ಲಿ ತೊಡಗಿದ್ದರು. ಆದರೆ ಮೋದಿ ಬೀಚ್ ಕ್ಲೀನಿಂಗ್ ಗಿಂತ ಅವರ ಕೈಯಲ್ಲಿದ್ದ ವಸ್ತುವೊಂದು ಸುದ್ದಿಗೆ ಗ್ರಾಸವಾಗಿತ್ತು. ಇದೀಗ ಈ ವಸ್ತು ಏನು ಎಂದು ಇದೀಗ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ.

ನಿನ್ನೆ ತಮಿಳುನಾಡಿನ ಮಹಾಬಲಿಪುರಂನ ಬೀಚ್ ನಲ್ಲಿ ಬೆಳ್ಳಂಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ  ಜಾಗಿಂಗ್ ​ ಮಾಡಿದ್ದರು. ಈ ವೇಳೆ ಜಾಗಿಂಗ್​​ ಮಾಡುತ್ತಾ ಕಸವನ್ನ ಆಯ್ದು ಸ್ವಚ್ಛ ಮಾಡಿದರು.. ಮೋದಿ ಸುಮಾರು ಅರ್ಧ ಗಂಟೆ ಕಾಲ ಸಮುದ್ರ ತೀರದಲ್ಲಿ ಕಸ ಹಾಗೂ ಪ್ಲಾಸ್ಟಿಕ್​​ ಬಾಟಲ್ ​ಗಳನ್ನ ಆಯ್ದು ಸ್ವಚ್ಛತೆ ಪಾಠ ಮಾಡಿದ್ರು. ಈ ವೇಳೆ ಅವರ ಕೈಯಲ್ಲಿದ್ದ ವಸ್ತುವೊಂದು ಜನರಲ್ಲಿ ಕುತೂಹಲ ಮೂಡಿಸಿತ್ತು. ಇದಕ್ಕೆ ಸ್ವತಃ ಮೋದಿಯೇ ಇಂದು ಉತ್ತರ ಕೊಟ್ಟಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ಪ್ಲಾಗಿಂಗ್ ಮಾಡುವಾಗ ನನ್ನ ಕೈಯಲ್ಲಿ ಇದ್ದಿದ್ದು ಏನು ಅಂತ ನಿನ್ನೆಯಿಂದ ಸಾಕಷ್ಟು ಜನ ಕೇಳ್ತಿದ್ದೀರ. ಅದೊಂದು ಆ್ಯಕ್ಯೂಪ್ರೆಶರ್​ ರೋಲರ್​. ನಾನು ಆಗಾಗ ಅದನ್ನು ಬಳಸುತ್ತೇನೆ. ಇದರಿಂದ ನನಗೆ ತುಂಬಾ ಉಪಯೋಗವಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ. ಆ ಮೂಲಕ ಜನರಲ್ಲಿದ್ದ ಪ್ರಶ್ನೆ ಮತ್ತು ಗೊಂದಲಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.