ಬಿಜೆಪಿ ಸಂಸದರಿಗೆ ಜನ ಉಗಿಯುತ್ತಿದ್ದಾರೆ ಎಂಬ ಪ್ರಕಾಶ್ ರೈ ಟೀಕೆ: ಕೇಂದ್ರದ ವಿರುದ್ಧ ಟೀಕೆ ಮೂರ್ಖತನ: ಸಿಟಿ ರವಿ
ಬಿಜೆಪಿ ವಕ್ತಾರ, ಸಚಿವ ಸಿ.ಟಿ.ರವಿ, ಪ್ರಕಾಶ್ ರೈ ಅವರಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆ ಎಂದು ಟೀಕಿಸಿದರು.

ಚಿಕ್ಕಬಳ್ಳಾಪುರ: ನೆರೆ ಸಂತ್ರಸ್ತರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಪರಿಹಾರ ನೀಡದ ಕಾರಣದಿಂದ ಸಂತ್ರಸ್ತರು ಬಿಜೆಪಿ ಸಂಸದರನ್ನು ಉಗಿಯುತ್ತಿದ್ದಾರೆ ಎಂಬ ನಟ ಪ್ರಕಾಶ್ ರೈ ಅವರನ್ನು ಟೀಕಿಸಿರುವ ಬಿಜೆಪಿ ವಕ್ತಾರ, ಸಚಿವ ಸಿ.ಟಿ.ರವಿ, ಪ್ರಕಾಶ್ ರೈ ಅವರಿಗೆ ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿಯೇ ಜನ ಚೆನ್ನಾಗಿ ಉಗಿದು ಕಳಿಸಿದ್ದಾರೆ ಎಂದು ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈ ಮಾಡಿರುವ ಟ್ವೀಟ್ ಅಭಿರುಚಿಯಿಂದ ಕೂಡಿಲ್ಲ. ಪ್ರಕಾಶ್ ರೈ ಅವರ ಚಲನಚಿತ್ರ ಯೋಗ್ಯತೆ ಬಗ್ಗೆ ಮಾತನಾಡುವುದಿಲ್ಲ. ಆದರೆ ಅವರ ರಾಜಕೀಯ ಯೋಗ್ಯತೆಗೆ ಜನ ಸರ್ಟಿಪಿಕೆಟ್ ಕೊಟ್ಟಿದ್ದಾರೆ. ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಸ್ಪಂದಿಸಲ್ಲ ಎನ್ನುವುದು ಮೂರ್ಖತನವಾಗುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


