ದೇಶ

ಗೋಡ್ಸೆ ಗಾಂಧೀಜಿಯನ್ನು ಒಮ್ಮೆ ಕೊಂದರೆ, ಆಧುನಿಕ ಗೋಡ್ಸೆಗಳು ಭಾರತವನ್ನು ಪ್ರತಿನಿತ್ಯ ಕೊಲ್ಲುತ್ತಿದ್ದಾರೆ: ಓವೈಸಿ

ನಾಥುರಾಮ್ ವಿನಾಯಕ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಒಮ್ಮೆ ಹತ್ಯೆ ಮಾಡಿದರೆ, ಭಾರತದ ಆಧುನಿಕ ಗೋಡ್ಸೆಗಳು ಪ್ರತೀನಿತ್ಯ ಕೊಲ್ಲುತ್ತಲೇ ಇದ್ದಾರೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಹೇಳಿದ್ದಾರೆ.

ಗೋಡ್ಸೆ ಗಾಂಧೀಜಿಯನ್ನು ಒಮ್ಮೆ ಕೊಂದರೆ, ಆಧುನಿಕ ಗೋಡ್ಸೆಗಳು ಭಾರತವನ್ನು ಪ್ರತಿನಿತ್ಯ ಕೊಲ್ಲುತ್ತಿದ್ದಾರೆ: ಓವೈಸಿ
ಅಸಾದುದ್ದೀನ್ ಓವೈಸಿ
Published On :

ಔರಂಗಾಬಾದ್: ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯವರನ್ನು ಒಮ್ಮೆ ಹತ್ಯೆ ಮಾಡಿದರೆ, ಭಾರತದ ಆಧುನಿಕ ಗೋಡ್ಸೆಗಳು ಪ್ರತೀನಿತ್ಯ ಕೊಲ್ಲುತ್ತಲೇ ಇದ್ದಾರೆಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಬುಧವಾರ ಹೇಳಿದ್ದಾರೆ. 

ಮಹಾರಾಷ್ಟ್ರದಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿರುವ ಅವರು, ನಾಥುರಾಮ್ ಗೋಡ್ಸೆ ಗಾಂಧೀಜಿಯವರನ್ನು ಒಮ್ಮೆ ಹತ್ಯೆ ಮಾಡಿದ್ದರು. ಆದರೆ, ಆಧುನಿಕ ಯುಗದ ಗೋಡ್ಸೆಗಳು ಭಾರತದ ಗಾಂಧಿಗಳನ್ನು ದಿನದ ಆಧಾರದ ಮೇಲೆ ಹತ್ಯೆ ಮಾಡುತ್ತಿದ್ದಾರೆಂದು ಹೇಳಿದ್ದಾರೆ. 

ಗಾಂಧೀಜಿಯವರಿಗೆ ಗೋಡ್ಸೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಆದರೆ, ಆಧುನಿಕ ಗೋಡ್ಸೆಗಳು ಗಾಂಧೀಯವರ ಹಿಂದೂಸ್ತಾನವನ್ನು ಪ್ರತೀನಿತ್ಯ ಕೊಲ್ಲುತ್ತಿದ್ದಾರೆ. ಗಾಂಧೀಜಿ ಪ್ರೀತಿ ಮಾಡಿದ್ದ ಈ ರಾಷ್ಟ್ರವನ್ನು ರಕ್ಷಣೆ ಮಾಡಿ ಎಂದು ಗಾಂಧೀಜಿಯವರ ಅನುಯಾಯಿಗಳಿಗೆ ಮನವಿ ಮಾಡಿಕೊಳ್ಳುತ್ತೇನೆಂದು ತಿಳಿಸಿದ್ದಾರೆ. 

ಇದೇ ವೇಳೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಅವರುಿ, ಮೋದಿ ಹಾಗೂ ಗೃಹ ಸಚಿವರು ಭಾರತದಲ್ಲೆಡೆ ಎನ್ಆರ್'ಸಿ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಭಾರತದಲ್ಲಿ ಸಂವಿಧಾನವಿದೆ ಎಂಬುದನ್ನು ಅವರು ಮರೆತಂದಿದ್ದಾರೆಂದು ಹೇಳಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.