ಓವೈಸಿ

ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗುವ ದಿನ ಬಂದೇ ಬರುತ್ತೆ: ಓವೈಸಿ
ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ ಓವೈಸಿಗೆ 'ಪಸ್ಮಾಂಡ' ಮುಸ್ಲಿಂ ಅಥವಾ ಹಿಜಾಬ್ ಧರಿಸಿದ ಮಹಿಳೆಯನ್ನು AIMIM ನ ಅಧ್ಯಕ್ಷರನ್ನಾಗಿ ಮಾಡುವಂತೆ ಸವಾಲು ಹಾಕಿದರು.

ಪಾಕಿಸ್ತಾನಕ್ಕೆ ಸ್ಥಗಿತಗೊಳಿಸಿದ್ದರಿಂದ ಬರುವ ಹೆಚ್ಚುವರಿ ನೀರನ್ನು ನಾವೆಲ್ಲಿ ಹಿಡಿದಿಟ್ಟುಕೊಳ್ಳೋದು?: ಓವೈಸಿ ಪ್ರಶ್ನೆ
ನವದೆಹಲಿಯಲ್ಲಿ ಕೇಂದ್ರ ಕರೆದಿದ್ದ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ಭದ್ರತೆಯ ಕುರಿತಾದ ಸಂಪುಟ ಸಮಿತಿ ತೆಗೆದುಕೊಂಡ ನಿರ್ಧಾರಗಳನ್ನು ಸ್ವಾಗತಿಸಿದರು.

ನಿಮಗೆ ಇಸ್ಲಾಮೋಫೋಬಿಯಾದ ಸಮಸ್ಯೆ ಇದೆ: ಮದರಸಾಗಳ ಕುರಿತು ಕೇಂದ್ರ ಸಚಿವರ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ!
ಮದರಸಾಗಳು ತನ್ನ ವಿದ್ಯಾರ್ಥಿಗಳಿಗೆ AK-47 ರೈಫಲ್ ಗಳ ತರಬೇತಿ ನೀಡುತ್ತಿದೆ ಎಂದು ಬಂಡಿ ಸಂಜಯ್ ಹೇಳಿದ್ದರು.

'ಆರ್ ಎಸ್ಎಸ್ ಚಡ್ಡಿ ಹಾಕಿಕೊಂಡು ಸಿಎಂ ಆಗಿದ್ದ ಶೆಟ್ಟರ್ ಕಾಂಗ್ರೆಸ್ ಸೇರಿದಾಕ್ಷಣ ಜಾತ್ಯಾತೀತವಾದಿಯಾದ್ರಾ?'
ಜಗದೀಶ ಶೆಟ್ಟರ್ ಆರ್‌ಎಸ್‌ಎಸ್ ತತ್ವ ಸಿದ್ಧಾಂತದಲ್ಲಿ ಬೆಳೆದು, ಬಿಜೆಪಿ ಪ್ರಗತಿಗೆ ಕಾರಣರಾದವರು. ಏಕಾಏಕಿ ಅವರನ್ನು ಕಾಂಗ್ರೆಸ್ ಮುಖಂಡರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಜಾತ್ಯತೀತ ಎಂದು ಪ್ರಮಾಣ ಪತ್ರ ನೀಡುತ್ತಾರೆ.

ಜನರಿಂದ ಮತ ಪಡೆಯಲು 'ಏಕರೂಪ ನಾಗರಿಕ ಸಂಹಿತೆ' ಪ್ರಸ್ತಾಪ ಮಾಡಿದೆ ಬಿಜೆಪಿ: ಓವೈಸಿ
ಗುಜರಾತ್ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ ಗಳಿಸಲು ಬಿಜೆಪಿ ಇದೀಗ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿಚಾರವನ್ನು ಪ್ರಸ್ತಾಪ ಮಾಡಿದೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ.

ಯತ್ನಾಳ್ಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ, ಅದಕ್ಕೇ ಪದೇ ಪದೇ ಪ್ರಸ್ತಾಪಿಸುತ್ತಾರೆ: ಓವೈಸಿ
ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದ್ದು, ಹೀಗಾಗಿಯೇ ಪಾಕಿಸ್ತಾನದ ಬಗ್ಗೆ ಪದೇ ಪದೇ ಉಲ್ಲೇಖಿಸುತ್ತಿದ್ದಾರೆಂದು ಎಐಎಂಐಎಂ ಅಧ್ಯಕ್ಷ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಮಂಗಳವಾರ ಹೇಳಿದ್ದಾರೆ.

ಕಾಂಡೋಮ್ ಹೆಚ್ಚು ಬಳಸುತ್ತಿರುವುದೇ ಮುಸ್ಲಿಮರು; ಜನಸಂಖ್ಯೆ ನಿಯಂತ್ರಣದ ಕುರಿತ ಭಾಗ್ವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ
ಕುಟುಂಬ ಯೋಜನೆ ಸಾಧನವಾದ ಕಾಂಡೋಮ್ ನ್ನು ಹೆಚ್ಚು ಬಳಸುತ್ತಿರುವುದೇ ಮುಸ್ಲಿಮರು ಎಂದು ಜನಸಂಖ್ಯೆ ನಿಯಂತ್ರಣದ ಕುರಿತ ಆರ್ ಎಸ್ಎಸ್ ನಾಯಕ ಮೋಹನ್ ಭಾಗ್ವತ್ ಕುರಿತ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾವರ್ಕರ್ ವಿರುದ್ಧದ ಹೇಳಿಕೆ: ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ನಕಾರ
ಮಹಾತ್ಮಾ ಗಾಂಧಿ ಅವರ ಹತ್ಯೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದರು ಎಂಬ ಹೇಳಿಕೆ ನೀಡಿದ್ದ ಅಸಾದುದ್ದೀನ್ ಓವೈಸಿ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸಲು ಅನುಮತಿಗೆ ಎ.ಜಿ ಕೆಕೆ ವೇಣುಗೋಪಾಲ್ ನಿರಾಕರಿಸಿದ್ದಾರೆ.

ಮುಸ್ಲಿಮರ ಸಂತೋಷ ಆಳೆಯುವ ಮಾನದಂಡವೇನು? ಅಸದುದ್ದೀನ್ ಒವೈಸಿ ಪ್ರಶ್ನೆ
ಪ್ರಪಂಚದಲ್ಲಿಯೇ ಭಾರತೀಯ ಮುಸ್ಲಿಮರು ಅತ್ಯಂತ ಸಂತೋಷವಾಗಿದ್ದಾರೆ. ಎಂಬ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಎಂ ಐ ಎಂ ಸಂಸದ ಅಸದುದ್ದೀನ್ ಒವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

