ಒಂದಲ್ಲ, ಎರಡಲ್ಲ ಬರೋಬ್ಬರಿ 7 ಪತ್ನಿಯರು: ಆತ್ಮಹತ್ಯೆಗೆ ಶರಣಾಗಿದ್ದ ಗಂಡನ ಮೃತದೇಹಕ್ಕಾಗಿ ಪತ್ನಿಯರ ಕಿತ್ತಾಟ!
ಬರೋಬ್ಬರಿ 7 ಪತ್ನಿಯರ ಮುದ್ದಿನ ಗಂಡ 40ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿದ್ದು ಆತನ ಮೃತದೇಹಕ್ಕಾಗಿ ಪತ್ನಿಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.

ಹರಿದ್ವಾರ: ಬರೋಬ್ಬರಿ 7 ಪತ್ನಿಯರ ಮುದ್ದಿನ ಗಂಡ 40ನೇ ವಯಸ್ಸಿಗೆ ಆತ್ಮಹತ್ಯೆಗೆ ಶರಣಾಗಿದ್ದು ಆತನ ಮೃತದೇಹಕ್ಕಾಗಿ ಪತ್ನಿಯರು ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ಉತ್ತರಖಂಡ್ ನ ಹರಿದ್ವಾರದಲ್ಲಿ 40 ವರ್ಷದ ಪವನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈಗ ಗಂಡನ ಮೃತದೇಹಕ್ಕಾಗಿ ಐವರು ಪತ್ನಿಯರು ಆಸ್ಪತ್ರೆಯ ಹೊರಗೆ ಕಿತ್ತಾಡಿಕೊಂಡಿದ್ದಾರೆ. ಪ್ರತಿಯೊಬ್ಬರೂ ಆತ ತನ್ನ ಪತಿಯೆಂದು ವಾದ ಮಾಡುತ್ತಿದ್ದರು. ಇದನ್ನು ನೋಡಿದ ಪೊಲೀಸರು ಕಂಗಾಲಾಗಿದರು. ಕೊನೆಗೆ ಐವರು ಪತ್ನಿಯರು ಗಂಡನ ಅಂತ್ಯಕ್ರಿಯೆ ನಡೆಸಿದರು.
ತಮ್ಮ ಗಂಡ ಸತ್ತ ಸುದ್ದಿ ತಿಳಿದ ಇನ್ನಿಬ್ಬರು ಪತ್ನಿಯರು ಪೊಲೀಸ್ ಠಾಣೆಗೆ ಬಂದು ತಮಗೆ ತಿಳಿಸದೆ ತಮ್ಮ ಗಂಡನ ಅಂತ್ಯ ಸಂಸ್ಕಾರ ಮಾಡಿರುವುದು ಸರಿಯಲ್ಲ ಎಂದು ಗಲಾಟೆ ಮಾಡಿದರು. ಈ ಘಟನೆಯಿಂದ ವಿಚಲಿತರಾದ ಪೊಲೀಸರು ಇನ್ನು ಕೆಲ ದಿನ ಕಾದು ಬಿಟ್ಟು ಪ್ರಕರಣ ಇತ್ಯರ್ಥ ಮಾಡಲು ನಿರ್ಧರಿಸಿದ್ದಾರೆ.
ಪವನ್ ಕುಮಾರ್ ಹಣಕಾಸು ತೊಂದರೆ ಅನುಭವಿಸುತ್ತಿದ್ದು ತನ್ನ ರೂಂನಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


