ದೇಶ

ಉದ್ಯೋಗದಲ್ಲಿ ಶೇ.80ರಷ್ಟು ಸ್ಥಳೀಯರಿಗೆ ಮೀಸಲು, ರೈತರ ಸಾಲ ಮನ್ನಾ: ಠಾಕ್ರೆ ಸರ್ಕಾರದ ಆಶ್ವಾಸನೆ

‘ಮಹಾ ವಿಕಾಸ್‌ ಅಘಾಡಿ’ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌) ನಾಯಕ ಉದ್ಧವ್ ಠಾಕ್ರೆ ಅವರು ಗುರುವಾರ ಮಹಾರಾಷ್ಟ್ರ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ....

ಉದ್ಯೋಗದಲ್ಲಿ ಶೇ.80ರಷ್ಟು ಸ್ಥಳೀಯರಿಗೆ ಮೀಸಲು, ರೈತರ ಸಾಲ ಮನ್ನಾ: ಠಾಕ್ರೆ ಸರ್ಕಾರದ ಆಶ್ವಾಸನೆ
ಎನ್ ಸಿಪಿ, ಶಿವಸೇನಾ, ಕಾಂಗ್ರೆಸ್ ನಾಯಕರು
Published On :

ಮುಂಬೈ:  ‘ಮಹಾ ವಿಕಾಸ್‌ ಅಘಾಡಿ’ (ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌) ನಾಯಕ ಉದ್ಧವ್ ಠಾಕ್ರೆ ಅವರು ಗುರುವಾರ ಮಹಾರಾಷ್ಟ್ರ 18ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ, 1 ರೂಪಾಯಿ ಕ್ಲಿನಿಕ್, 10 ರೂಪಾಯಿಗೆ ಊಟ ತಿಂಡಿ ಹಾಗೂ ರೈತರ ಸಾಲ ಮನ್ನಾ ಮಾಡುವ ಆಶ್ವಾಸನೆ ನೀಡಿದೆ.

ಮಹಾ ವಿಕಾಸ್ ಅಘಾಡಿ ಹೆಸರಿನ ಮೈತ್ರಿ ಸರ್ಕಾರ ಇಂದು ರಚನೆಯಾಗಿದ್ದು, ಶಿವಸೇನೆಯ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಒಂದು ಗಂಟೆಗೂ ಮುನ್ನ ನಾಲ್ಕು ಪುಟಗಳ ಸಾಮಾನ್ಯ ಕನಿಷ್ಠ ಯೋಜನೆಯನ್ನು ಬಿಡುಗಡೆ ಮಾಡಲಾಗಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಪಟ್ಟಿಯಲ್ಲಿ, ಚುನಾವಣೆ ವೇಳೆ ನೀಡಿದ ಭರವಸೆಯಂತೆ ರೈತರ ಸಾಲ ಮನ್ನಾ. ಯುವಕರಿಗೆ ಉದ್ಯೋಗ, ಉದ್ಯೋಗದಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ. 10 ರೂಪಾಯಿ ಆಹಾರ ನೀಡುವುದು ಸೇರಿದಂತೆ ಹಲವು ಆಶ್ವಾಸನೆ ನೀಡಲಾಗಿದೆ.

ಈ ಯೋಜನೆಯ ಅಂಶಗಳ ಅನುಷ್ಠಾನಕ್ಕೆ ಎರಡು ಸಮನ್ವಯ ಸಮಿತಿಗಳನ್ನು ರಚಿಸಲಾಗಿದೆ. ಒಂದು ರಾಜ್ಯ ಸಂಪುಟದೊಳಗಿನದ್ದು, ಮತ್ತೊಂದು ಇಡೀ ಮೈತ್ರಿಯನ್ನು ಒಳಗೊಂಡ ಸಮನ್ವಯ ಸಮಿತಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.