ತಮಿಳುನಾಡು ಸರ್ಕಾರದಿಂದ ಪೊಂಗಲ್ ಗೆ 1 ಸಾವಿರ ರೂ. ಹಾಗೂ 'ಗಿಫ್ಟ್ ಹ್ಯಾಂಪರ್'
ತಮಿಳುನಾಡು ಸರ್ಕಾರ ರಾಜ್ಯದ ಬಡ ಜನತೆಗೆ ಭರ್ಜರಿ ಪೊಂಗಲ್ ಗಿಫ್ಟ್ ಘೋಷಿಸಿದ್ದು, ಪ್ರತಿಕುಟುಂಬಕ್ಕೆ 1 ಸಾವಿರ ರೂ. ನಗದು ಹಾಗೂ 'ಗಿಫ್ಟ್ ಹ್ಯಾಂಪರ್' ನೀಡುವುದಾಗಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಘೋಷಿಸಿದ್ದಾರೆ.

ಚೆನ್ನೈ: ತಮಿಳುನಾಡು ಸರ್ಕಾರ ರಾಜ್ಯದ ಬಡ ಜನತೆಗೆ ಭರ್ಜರಿ ಪೊಂಗಲ್ ಗಿಫ್ಟ್ ಘೋಷಿಸಿದ್ದು, ಪ್ರತಿ
ಕುಟುಂಬಕ್ಕೆ 1 ಸಾವಿರ ರೂ. ನಗದು ಹಾಗೂ 'ಗಿಫ್ಟ್ ಹ್ಯಾಂಪರ್' ನೀಡುವುದಾಗಿ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮಂಗಳವಾರ ಘೋಷಿಸಿದ್ದಾರೆ.
ಕಳೆದ ವರ್ಷ ಸಹ ಪೊಂಗಲ್ ಉಡುಗೊರೆಯಾಗಿ ತಮಿಳುನಾಡು ಸರ್ಕಾರ ನಗದು ಹಾಗೂ ಗಿಫ್ಟ್ ಹ್ಯಾಂಪರ್ ನೀಡಿದ್ದನ್ನು ನೆನಪಿಸಿಕೊಂಡ ಸಿಎಂ, ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಲು ಈ ಬಾರಿಯೂ 1 ಸಾವಿರ ರೂ. ನಗದು ಹಾಗೂ ಗಿಫ್ಟ್ ಹ್ಯಾಂಪರ್ ನೀಡಲಾಗುತ್ತಿದೆ ಎಂದರು.
1 ಸಾವಿರ ರೂ. ನಗದಿನ ಜತೆಗೆ ಅಕ್ಕಿ, ಸಕ್ಕರೆ, ಗೋಡಂಬಿ, ಏಲಕ್ಕಿ ಹಾಗೂ ಕಬ್ಬನ್ನು ಒಳಗೊಂಡ ಗಿಫ್ಟ್ ಹ್ಯಾಂಪರ್ ಅನ್ನು ಪಡಿತರ ಕಾರ್ಡ್ದಾರರಿಗೆ ವಿತರಿಸಲಾಗುವುದು ಎಂದು ಸಿಎಂ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


