25 ವರ್ಷದ ಸ್ನೇಹಿತನನ್ನು ಬಿಟ್ಟವರು ಒಂದು ದಿನ ಅಜಿತ್ ಪವಾರ್ ನನ್ನೂ ಮೂಲೆಗೆ ಬಿಸಾಕುತ್ತಾರೆ : ಶಿವಸೇನೆ
ತಮ್ಮ 25 ವರ್ಷಗಳ ಸ್ನೇಹವನ್ನು ಗೌರವಿಸದವರು ಒಂದು ದಿನ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಕೂಡ ಒಂದು ದಿನ ಕಿತ್ತು ಬಿಸಾಕುತ್ತಾರೆ ಎಂದು ಬಿಜೆಪಿ ವಿರುದ್ಧ ಶಿವಸೇನೆ ಟೀಕೆ ಮುಂದುವರಿಸಿದೆ.

ಮುಂಬೈ: ತಮ್ಮ 25 ವರ್ಷಗಳ ಸ್ನೇಹವನ್ನು ಗೌರವಿಸದವರು ಒಂದು ದಿನ ಎನ್ ಸಿಪಿ ನಾಯಕ ಅಜಿತ್ ಪವಾರ್ ಅವರನ್ನು ಕೂಡ ಒಂದು ದಿನ ಕಿತ್ತು ಬಿಸಾಕುತ್ತಾರೆ ಎಂದು ಬಿಜೆಪಿ ವಿರುದ್ಧ ಶಿವಸೇನೆ ಟೀಕೆ ಮುಂದುವರಿಸಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಕುರಿತು ಸಂಪಾದಕೀಯ ಬರೆದಿದ್ದು ಅಜಿತ್ ಪವಾರ್ ವಿರುದ್ಧ ಗುರಿಯಾಗಿಟ್ಟುಕೊಂಡು ಬರೆದಿದ್ದು ಅವರ ಬಂಡಾಯ ವಿಫಲವಾಗಿದೆ, ಅದು ಮುಂದಿನ ಕೆಲ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಕದ್ದು ಓಡಿಹೋಗುವವರ ರೀತಿ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಮ್ಮ ಪಕ್ಷದಿಂದ ಕದ್ದ ಪತ್ರವನ್ನು ನೀಡಿದ ಅಜಿತ್ ಪವಾರ್ ಅವರ ಬೆಂಬಲ ಪತ್ರವನ್ನು ಸ್ವೀಕರಿಸಿ ಸರ್ಕಾರ ರಚನೆ ಮಾಡಲು ಅವಕಾಶ ನೀಡಿದ ರಾಜ್ಯಪಾಲರ ಕೃತ್ಯ ಮೋಸದ ಪರಮಾವಧಿ. ಇದನ್ನು ನಾಚಿಕೆಗೇಡು ಎಂದು ಹೇಳಿ ಸಾಂವಿಧಾನಿಕ ಸಂಸ್ಥೆಯನ್ನು ಅವಮಾನ ಮಾಡಲು ನಾವು ಬಯಸುವುದಿಲ್ಲ ಎಂದು ಶಿವಸೇನೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


