ಪ್ರಧಾನಿ ಮೋದಿ - ಅಮಿತ್ ಶಾ ಹೆಣೆದ ಸೂತ್ರಕ್ಕೆ ಶರದ್ ಪವಾರ್ ಪಂಕ್ಚರ್ ಆಗಿದ್ದೇಗೆ?
ಮಹಾರಾಷ್ಟ್ರ ರಾಜಕೀಯಲದಲ್ಲಿ ಹೊಸ ಮತ್ತು ಅನಿರೀಕ್ಷಿತ ಬೆಳವಣಿಗೆಗೆ ನಡೆದಿದ್ದು ಇದರ ಹಿಂದೆ ಬಿಜೆಪಿ ಹೈಕಮಾಂಡ್ ನ ಕಾಣದ ಕೈಗಳು ಬಹಳ ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದೆ.

ನವದೆಹಲಿ: ಮಹಾರಾಷ್ಟ್ರ ರಾಜಕೀಯಲದಲ್ಲಿ ಹೊಸ ಮತ್ತು ಅನಿರೀಕ್ಷಿತ ಬೆಳವಣಿಗೆಗೆ ನಡೆದಿದ್ದು ಇದರ ಹಿಂದೆ ಬಿಜೆಪಿ ಹೈಕಮಾಂಡ್ ನ ಕಾಣದ ಕೈಗಳು ಬಹಳ ಸೈಲೆಂಟ್ ಆಗಿ ಕೆಲಸ ಮಾಡಿ ಮುಗಿಸಿದೆ.
ಮೊನ್ನೆಯಷ್ಟೆ ಉದ್ದವ ಠಾಕ್ರೆ ಮುಂದಿನ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ್ದ ಶರದ್ ಪವಾರ್ ಕೊನೆಯಲ್ಲಿ ನಿಲುವು ಬದಲಿಸಲು ಕಾರಣವೇನು? ಇದರ ಹಿಂದಿನ ಶಕ್ತಿ ಯಾರು? ಎಂಬ ಚರ್ಚೆಗಳು ನಡೆಯುತ್ತಿವೆ .
ಇದರ ಹಿಂದೆ ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಕಾಣದ ಕೈಗಳು ಕೆಲಸ ಮಾಡಿವೆ ಎಂಬ ಮಾತು ಕೇಳಿಬಂದಿದೆ.
ಹೌದು ರಾಜಕೀಯ ವಿಶ್ಲೇಷಕರ ಪ್ರಕಾರ, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಕಸರತ್ತು ಮುಂದುವರೆದಿತ್ತು. ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿ ಶಿವಸೇನೆ ಸರ್ಕಾರ ರಚಿಸುವ ಕನಸು ಕಾಣುತ್ತಿತ್ತು. ಅಲ್ಲದೆ ಈ ಸಂಬಂಧ ಹಲವು ಮಹತ್ವದ ಚರ್ಚೆಗಳನ್ನು ಮೂರು ಪಕ್ಷಗಳು ನಡೆಸುತ್ತಿದ್ದವು. ಆದರೆ ಬಿಜೆಪಿ ಮಾತ್ರ ಯಾವುದೇ ರೀತಿಯ ಹೇಳಿಕೆಗಳನ್ನು ಕೊಡದೇ ಒಳಗೊಳಗೆ ತಾನು ಅಂದುಕೊಂಡ ಕೆಲಸವನ್ನು ನಾಜೂಕಾಗಿ ಮಾಡಿ ಮುಗಿಸಿದೆ.
ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರಿಗೂ ತಿಳಿಯದಂತೆ ಅವರ ಸಹೋದರನ ಪುತ್ರ ಅಜಿತ್ ಪವಾರ್ ಜೊತೆ ಬಿಜೆಪಿ ಗುಪ್ತ ಮಾತುಕತೆ ನಡೆಸಿ ಬೆಂಬಲ ಪಡೆದು ಇಂದು ದಿಢೀರ್ ಅಂತಾ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಮತ್ತು ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


